ಭಾರತ, ಮಾರ್ಚ್ 8 -- 2002 ಮತ್ತು 2013ರ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೂರನೇ ಪ್ರಶಸ್ತಿಗೆ ಮುತ್ತಿಕ್ಕಲು ಟೀಮ್ ಇಂಡಿಯಾ ಸಜ್ಜಾಗಿದೆ. ಮಾರ್ಚ್​ 9ರಂದು ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ನ್ಯೂಜಿಲೆಂಡ್ ಮಣಿಸಿ 25 ವರ್ಷಗಳ ಲೆಕ್ಕಾ ಚುಪ್ತಾ ಮಾಡಲು ಸಿದ್ದವಾಗಿದೆ. ಮತ್ತೊಂದೆಡೆ 2000ರ ಫೈನಲ್ ಫಲಿತಾಂಶ ರಿಪೀಟ್ ಮಾಡಲು ನ್ಯೂಜಿಲೆಂಡ್ ಕಾತರದಿಂದ ಕಾಯುತ್ತಿದೆ. ಹಾಗಿದ್ದರೆ ಉಭಯ ತಂಡಗಳ ಫೈನಲ್​ ಕಾದಾಟಕ್ಕೂ ಮುನ್ನ ಪಿಚ್ ರಿಪೋರ್ಟ್, ವೆದರ್ ರಿಪೋರ್ಟ್ ಹೇಗಿದೆ ಎಂಬ ವಿವರ ಇಂತಿದೆ.

ಚಾಂಪಿಯನ್ಸ್ ಟ್ರೋಫಿಯ ಫೈನಲ್​ಗೂ ಮುನ್ನ ಭಾರತ ತಂಡವು ಲೀಗ್​ನಲ್ಲಿ ಅಜೇಯವಾಗಿತ್ತು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಲೀಗ್​ನಲ್ಲಿ ಗೆದ್ದಿದ್ದ ಭಾರತ ಸೆಮಿಫೈನಲ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೀಗ ಫೈನಲ್​ನಲ್ಲಿ ಕಿವೀಸ್ ಎದುರಿಸಲು ಸಜ್ಜಾಗಿದೆ. ಅತ್ತ ನ್ಯೂಜಿಲೆಂಡ್ ಲೀಗ್​ನಲ್ಲಿ ಬಾಂಗ್ಲಾದೇಶ, ಪಾಕಿಸ್ತಾನವನ...