ಭಾರತ, ಮಾರ್ಚ್ 2 -- ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲುವು ಸಾಧಿಸುವುದರೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​ನಲ್ಲಿ ಮುಖಾಮುಖಿ ಆಗುವ ತಂಡಗಳು ಯಾವುವು ಎಂಬುದು ಖಚಿತಗೊಂಡಿದೆ. ಮಾರ್ಚ್​​ 4ರಂದು ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇದು 2023ರ ನವೆಂಬರ್ 19 ರಂದು ನಡೆದ 2023 ರ ಕ್ರಿಕೆಟ್ ವಿಶ್ವಕಪ್ ನಂತರ ಎರಡೂ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯವಾಗಲಿದೆ. ಇಂಡೋ-ಆಸೀಸ್ ಕದನ ದುಬೈನಲ್ಲಿ ನಡೆಯಲಿದೆ. ಮಾರ್ಚ್ 5ರಂದು 2ನೇ ಸೆಮೀಸ್​​ನಲ್ಲಿ ನ್ಯೂಜಿಲೆಂಡ್ ಬುಧವಾರ (ಮಾರ್ಚ್ 5) ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಚಾಂಪಿಯನ್ಸ್ ಟ್ರೋಫಿಯ ಲೀಗ್​ ಹಂತದಲ್ಲಿ ಹ್ಯಾಟ್ರಿಕ್ ನೊಂದಿಗೆ ಸೆಮೀಸ್​​ಗೆ ಎಂಟ್ರಿಕೊಟ್ಟಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿತ್ತು. ಬಳಿಕ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧವೂ ಅಷ್ಟೇಬ ವಿಕೆಟ್​ಗಳಿಂದ ಜಯಿಸಿದ್ದ ಭಾರತ ಸೆಮಿಫೈನಲ್​ಗೆ ಲಗ್ಗೆ ...