Bengaluru, ಏಪ್ರಿಲ್ 18 -- ಗುಡ್ ಫ್ರೈಡೇ 2025: ಯೇಸು ಕ್ರಿಸ್ತನ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸುವ ಗುಡ್ ಫ್ರೈಡೇಯನ್ನು ಇಂದು (ಏಪ್ರಿಲ್ 18, ಶುಕ್ರವಾರ) ಎಲ್ಲಾ ಕ್ರೈಸ್ತ ಸಮುದಾಯದವರು ಭಾರತ ಸೇರಿದಂತೆ ಜಗತ್ತಿನಾದ್ಯಂತ ಆಚರಿಸುತ್ತಿದ್ದಾರೆ. ಗುಡ್ ಫ್ರೈಡೇಯನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ. ಯೇಸು ಕ್ರಿಸ್ತನು ಈ ಲೋಕದಲ್ಲಿನ ಮನುಷ್ಯರ ಪಾಪಗಳಿಗಾಗಿ ತಾನು ಶಿಲುಬೆಯಲ್ಲಿ ಪ್ರಾಣವನ್ನು ಅರ್ಪಿಸಿದ ಎಂದು ಬೈಬಲ್ ಹೇಳುತ್ತದೆ. ಈ ತ್ಯಾಗವನ್ನು ಸ್ಮರಿಸಿ ಕ್ರೈಸ್ತ ಬಾಂಧವರು ಇವತ್ತು ಚರ್ಚ್ ಗಳಲ್ಲಿ ಉಪವಾಸ ಪ್ರಾರ್ಥನೆಗಳೊಂದಿಗೆ ದೇವರ ವಾಕ್ಯಗಳನ್ನು ಓದುತ್ತಾರೆ. ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್ಮನ್ ಹಬ್ಬದ ಸಂದರ್ಭದಲ್ಲಿ ಯೇಸು ಕ್ರಿಸ್ತನ ಹುಟ್ಟಿದ ದಿನವನ್ನು ಸಂಭ್ರಮಿಸಲಾಗುತ್ತದೆ. ಆದರೆ ಗುಡ್ ಫ್ರೈಡೇಯಲ್ಲಿ ಆತನ ಮರಣ ಹೊಂದಿರುವುದನ್ನು ಸ್ಮರಿಸಲಾಗುತ್ತದೆ.

ಶಿಲುಬೆಯಲ್ಲಿ ಯೇಸು ಮರಣವನ್ನು ಹೊಂದಿರುವುದನ್ನು ಕ್ರೈಸ್ತರು ತ್ಯಾಗ ಅಥವಾ ಬಲಿದಾನವಾಗಿ ಸ್ವೀಕರಿಸುತ್ತಾರೆ. ಇದು ಒಳ್ಳೆಯದು. ಹೀಗ...