ಭಾರತ, ಮಾರ್ಚ್ 5 -- ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್‌ ಸ್ಟೀವ್ ಸ್ಮಿತ್ (Steve Smith) ಏಕದಿನ ಕ್ರಿಕೆಟ್‌ಗೆ ಅಚ್ಚರಿಯ ವಿದಾಯ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಬೆನ್ನಲ್ಲೇ ಕ್ರಿಕೆಟಿಗ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ಭಾರತ ವಿರುದ್ಧದ ಸೆಮಿ ಕದನದಲ್ಲಿ 73 ರನ್ ಗಳಿಸಿದ ಅವರು ಆಸ್ಟ್ರೇಲಿಯಾ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಇದನ್ನೇ ತಮ್ಮ ಕೊನೆಯ ಏಕದಿನ ಪಂದ್ಯ ಎಂದು ತಂಡದ ಸಹ ಆಟಗಾರರಿಗೆ ತಿಳಿಸಿದರು. ಏಕದಿನ ಸ್ವರೂಪಕ್ಕೆ ವಿದಾಯ ಹೇಳಿದರೂ, 35 ವರ್ಷದ ಆಟಗಾರ ದೇಶದ ಪರ ಟೆಸ್ಟ್ ಹಾಗೂ ಟಿ20 ಪಂದ್ಯಗಳನ್ನು ಆಡುವುದನ್ನು ಮುಂದುವರೆಸಲಿದ್ದಾರೆ.

"ಇದೊಂದು ಉತ್ತಮ ಪ್ರಯಾಣ, ಅದರ ಪ್ರತಿ ನಿಮಿಷವನ್ನೂ ಪ್ರೀತಿಸಿದ್ದೇನೆ. ಅದ್ಭುತ ಸಮಯ ಮತ್ತು ನೆನಪುಗಳಿವೆ. ನನ್ನ ಪ್ರಯಾಣದಲ್ಲಿ ಭಾಗವಾಗಿದ್ದ ತಂಡದ ಸಹ ಆಟಗಾರರೊಂದಿಗೆ ಎರಡು ವಿಶ್ವಕಪ್‌ಗಳನ್ನು ಗೆಲ್ಲುವುದು ಉತ್ತಮ ಪ್ರಯಾಣದ ಪ್ರಮುಖ ಅಂಶ," ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

"2027ರ ವಿಶ್...