ಭಾರತ, ಮಾರ್ಚ್ 24 -- ಭಾರತ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿಯರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾರ್ಚ್ 24ರ ಸೋಮವಾರ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರು ಕಾಂಟ್ರ್ಯಾಕ್ಟ್ ಪಡೆದಿದ್ದಾರೆ. ನೂತನವಾಗಿ ಪ್ರಕಟಗೊಂಡ 2024-25ರ ಸಾಲಿನ ವಾರ್ಷಿಕ ಒಪ್ಪಂದದಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನರನ್ನು ಬಿಸಿಸಿಐ ಎ ಗ್ರೇಡ್‌ನಲ್ಲಿ ಉಳಿಸಿಕೊಳ್ಳಲಾಗಿದೆ. ಆಲ್‌ರೌಂಡರ್ ದೀಪ್ತಿ ಶರ್ಮಾ ಕೂಡ ಎ ಗ್ರೇಡ್ ವಿಭಾಗದಲ್ಲೇ ಮುಂದುವರೆದಿದ್ದಾರೆ.
ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಒಟ್ಟು 16 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಈ ಒಪ್ಪಂದವು ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025ರವರೆಗಿನ ಅವಧಿಗೆ ಸೀಮಿತವಾಗಿದೆ. ಕಳೆದ ಬಾರಿಯೂ ಹರ್ಮನ್‌ಪ್ರೀತ್, ಮಂಧಾನ ಮತ್ತು ದೀಪ್ತಿ ಶರ್ಮಾ ಅವರು ಎ ಗ್ರೇಡ್ನಲ್ಲೇ ಇದ್ದರು. ಬಿ ಗ್ರೇಡ್‌ನಲ್ಲಿ ಒಟ್ಟು 4 ಆಟಗಾರ್ತಿಯರು ಸ್ಥಾನ ಪಡೆದಿದ್ದು, ವೇಗದ ಬೌಲ...
Click here to read full article from source
To read the full article or to get the complete feed from this publication, please
Contact Us.