Bengaluru, ಮೇ 13 -- ಬೆಂಗಳೂರು: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ದಾಳಿ ನಡೆಯುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಎಚ್ಚರಿಕೆ ನೀಡಿದ್ದಾರೆ. ಈ ಹಂತದಲ್ಲಿ ಸೈಬರ್ ಅಪರಾಧಿಗಳು ನಕಲಿ ಲಿಂಕ್‌ , ಇ-ಮೇಲ್‌ ಮತ್ತು ದುರುದ್ದೇಶಪೂರಿತ ಫೈಲ್‌ ಗಳ ಮೂಲಕ ಡೇಟಾ ಕದಿಯಲು ಅಥವಾ ಹ್ಯಾಕ್ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದ್ದರಿಂದ ನಾಗರಿಕರು ಜಾಗರೂಕರಾಗಿರುವಂತೆ ಮತ್ತು ಅನುಮಾನಾಸ್ಪದ ಲಿಂಕ್‌ಗಳನ್ನು ಓಪನ್‌ ಮಾಡದಂತೆ ಸೂಚಿಸಿದ್ದಾರೆ.

ಅದರಲ್ಲೂ ವಿಶೇಷವಾಗಿ "ಎಕ್ಸ್‌ಕ್ಲೂಸಿವ್ ಇಂಡೋ-ಪಾಕ್ ಅಪ್‌ಡೇಟ್" ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುವ ಲಿಂಕ್‌ ಗಳ ಬಗ್ಗೆ ಎಚ್ಚರಿಕೆಯಿಂದಿ ಇರಬೇಕು. ಇಂತಹ ಲಿಂಕ್‌ಗಳು ಸೈಬರ್ ಅಪರಾಧಿಗಳಿಂದ ಚಿತ್ರಿಸಲ್ಪಟ್ಟಿರುವ ನಕಲಿ ದೃಶ್ಯಗಳಾಗಿರಬಹುದು, ಇದರಿಂದ ಮೊಬೈಲ್‌ ಹಾಗೂ ಕಂಪ್ಯೂಟರ್‌ ಹ್ಯಾಕ್ ಆಗುವ ಸಾಧ್ಯತೆಯಿದೆ. ಪ್ರತಿಯೊಂದು ವಿಶೇಷ ಸುದ್ದಿಯ ಲಿಂಕ್ ಸುರಕ್...