ಭಾರತ, ಫೆಬ್ರವರಿ 23 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಕದನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (India and Pakistan) ಸೆಣಸುತ್ತಿವೆ. ಈ ಪಂದ್ಯ ಕಾವು ಜಗತ್ತಿಗೆ ಆವರಿಸಿದೆ. ಭಾರತ ತಂಡ ಸೆಮಿಫೈನಲ್​ ಟಿಕೆಟ್ ಖಾತ್ರಿಪಡಿಸಿಕೊಳ್ಳುವ ಗುರಿಯ ಜೊತೆಗೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲೂ ಇದೆ. ಈಗಾಗಲೇ ಮೊದಲ ಸೋಲು ಕಂಡಿರುವ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದನ್ನು ತಪ್ಪಿಸಿಕೊಳ್ಳಬೇಕಾಗಿರುವುದರ ಜೊತೆಗೆ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದರ ಒತ್ತಡವೂ ತನ್ನಲ್ಲಿದೆ. ಈ ರೋಚಕ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸುತ್ತಿದೆ.

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ 3-2ರಲ್ಲಿ ಮುನ್ನಡೆಯಲ್ಲಿರುವ ಪಾಕಿಸ್ತಾನ ಅದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲೂ ಇದೆ. ಮತ್ತೊಂದೆಡೆ ದುಬೈ ಪಾಕ್​ಗೆ ಚಿರಪರಿತವೂ ಹೌದು. ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿ ಉಳಿದ ಐಸಿಸಿ ಟೂರ್ನಿಗಳಲ್ಲಿ ಮೇಲುಗೈ ಸಾಧಿಸಿರುವುದು ಭಾರತದ ಆತ್ಮ ವಿ...