ಭಾರತ, ಏಪ್ರಿಲ್ 27 -- ಹಲವು ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ಕರುಣ್‌ ನಾಯರ್‌, ಇನ್ನೂ ಟೀಮ್‌ ಇಂಡಿಯಾ ಪರ ಆಡಲು ಕಾಯುತ್ತಿದ್ದಾರೆ. ಐಪಿಎಲ್‌ನಲ್ಲಿ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುವ ಅವಕಾಶ ಪಡೆದ ಆಟಗಾರ, ಡೆಲ್ಲಿ ತಂಡದ ಪರ ಆಡಿದ ಮೊದಲ ಪಂದ್ಯದಲ್ಲೇ ಅಮೋಘ ಅರ್ಧಶತಕ ಸಿಡಿಸಿದರು. ಆ ಮೂಲಕ ಯಾವ ಸ್ವರೂಪದ ಕ್ರಿಕೆಟ್‌ನಲ್ಲೂ ತಾನೊಬ್ಬ ಸಮರ್ಥ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದೀಗ ಟೂರ್ನಿಯಲ್ಲಿ ಮತ್ತಷ್ಟು ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

ಕರುಣ್‌ ನಾಯರ್‌ಗೆ ಈಗ 33 ವರ್ಷ ವಯಸ್ಸು. ಅವರಲ್ಲಿ ಇನ್ನೂ ಕ್ರಿಕೆಟ್‌ ಜೀವಂತವಾಗಿದೆ. ಭಾರತ ಕ್ರಿಕೆಟ್‌ ತಂಡದಲ್ಲಿ ಒಂದು ಅವಕಾಶಕ್ಕಾಗಿ ಅವರು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಟೀಮ್‌ ಇಂಡಿಯಾ ಪರ ತ್ರಿಶತಕ ಸಿಡಿಸಿದ ಕೇವಲ ಎರಡನೇ ಆಟಗಾರ ಎನಿಸಿಕೊಂಡಿರುವ ಕರುಣ್‌, ಈಗಲೂ ತಮ್ಮ ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರ ಫಿಟ್‌ನೆಸ್‌ ಸೀಕ್ರೆಟ್‌ಗಳು ಏನೇನು ಎಂಬುದನ್ನು ತಿಳಿಯೋಣ.

ನಾನು ಹೆಚ್ಚು ಸಮಯ ಮೈದಾನದಲ್ಲಿ ಇ...