ಭಾರತ, ಮೇ 14 -- ಎರಡು ಒಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿರುವ ಭಾರತದ ಜಾವೆಲಿನ್ ಸ್ಟಾರ್​ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ಪ್ರಮುಖ ಹುದ್ದೆ ನೀಡಿ ಗೌರವಿಸಲಾಗಿದೆ. ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಿ ಗೌರವಿಸಿರುವ ಕುರಿತು ರಕ್ಷಣಾ ಸಚಿವಾಲಯ ಅಧಿಕೃತ ಘೋಷಣೆ ಮಾಡಿದೆ. ಭಾರತ ಸರ್ಕಾರದ ವಾರಪತ್ರಿಕೆ ಗೆಜೆಟ್ ಆಫ್ ಇಂಡಿಯಾದಲ್ಲಿ ಈ ಬಗ್ಗೆ ಬಿಡುಗಡೆ ಮಾಡಿದೆ. ಇದು 2025ರ ಏಪ್ರಿಲ್ 16ರಿಂದ ಜಾರಿಗೆ ಬಂದಿದೆ.

2020ರ ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಚರಿತ್ರೆ ಸೃಷ್ಟಿಸಿದ್ದರು. ಇನ್ನು ಕಳೆದ ವರ್ಷ ನಡೆದ 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಮತ್ತೆ ಅದ್ಭುತ ಪ್ರದರ್ಶನ ನೀಡಿದ್ದ ಚೋಪ್ರಾ ಬೆಳ್ಳಿ ಪದಕ ಜಯಿಸಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕ ಗೆದ್ದ ಕೆಲವೇ ಕ್ರೀಡಾಪಟುಗಳ ಪಟ್ಟಿಗೆ ಇವರು ಸೇರ್ಪಡೆಯಾಗಿ...