ಭಾರತ, ಮೇ 14 -- ಭಾರ್ಗವಾಸ್ತ್ರ ಪ್ರಯೋಗ ಯಶಸ್ವಿ: ಒಡಿಶಾದ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಸ್ವದೇಶಿ ನಿರ್ಮಿತ ಭಾರ್ಗವಾಸ್ತ್ರದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ. ಭಾರ್ಗವಾಸ್ತ್ರ ಪರೀಕ್ಷೆ ನಡೆಸುವುದಕ್ಕಾಗಿ ಮೈಕ್ರೋ ರಾಕೆಟ್‌ಗಳನ್ನು ಉಡಾವಣೆ ಮಾಡಲಾಗಿತ್ತು. ಪಾಕಿಸ್ತಾನದ ಜತೆಗಿನ 4 ದಿನಗಳ ತೀವ್ರ ಬಿಕ್ಕಟ್ಟು ಶಮನಗೊಳಿಸುವ ಕದನ ವಿರಾಮ ಘೋಷಿಸಿದ ಬೆನ್ನಿಗೆ ನಡೆದ ಈ ಪರೀಕ್ಷಾ ಪ್ರಯೋಗ ಗಮನಸೆಳೆದಿದೆ. ಸೋಲಾರ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಲಿಮಿಟೆಡ್ ಈ ಭಾರ್ಗವಾಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಗುಂಪು ಡ್ರೋನ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಭಾರ್ಗವಾಸ್ತ್ರ ಬಹುದೊಡ್ಡ ವರದಾನವಾಗಲಿದೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೇನಾ ವಾಯು ರಕ್ಷಣೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಭಾರ್ಗವಾಸ್ತ್ರ ಪರೀಕ್ಷೆ ನಡೆಯಿತು. ಒಟ್ಟು ಮೂರು ಪರೀಕ್ಷೆ ನಡೆಸಲಾಗಿದ್ದು, ಎರಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.