Bangalore, ಏಪ್ರಿಲ್ 24 -- ಬೆಂಗಳೂರು: ಇನ್ನೇನು ಬೇಸಿಗೆ ಮುಗಿಯಲು ಒಂದು ತಿಂಗಳ ಸಮಯವಿದೆ. ಆಗಲೇ ಹಲವು ಕಡೆಗಳಲ್ಲಿ ಪೂರ್ವ ಮುಂಗಾರು ನಿಧಾನವಾಗಿ ಶುರುವಾಗುತ್ತಿದೆ. ಮುಂಗಾರು ಹಂಗಾಮಿಗೆ ಭಾರತೀಯ ರೈಲ್ವೆ ಕೂಡ ಅಣಿಯಾಗುತ್ತಿದೆ. ಗಾರು ಮಳೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಸುಗಮ ಸಂಚಾರಕ್ಕಾಗಿ ನೈರುತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಸಂಚರಿಸುವ ಕೆಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಕೊಂಕಣ ರೈಲ್ವೆ ನಿಗಮ ನಿಯಮಿತ ತಿಳಿಸಿದೆ. ಈ ಪರಿಷ್ಕೃತ ವೇಳಾಪಟ್ಟಿ 2025ರ ಜೂನ್ ಹದಿನೈದರಿಂದ ಅಕ್ಟೋಬರ್ ಇಪ್ಪತ್ತರವರೆಗೆ ಜಾರಿಯಲ್ಲಿರುತ್ತದೆ. ರಿಷ್ಕೃತ ಸಮಯವು 2025ರ ಜೂನ್ ಹದಿನೈದರಂದು ಅಥವಾ ನಂತರ ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಅನ್ವಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

1. ರೈಲು ಸಂಖ್ಯೆ 16595/16596 ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್.

2. ರೈಲು ಸಂಖ್ಯೆ 16585/16586 ಎಸ್ಎಂವಿಟಿ ಬೆಂಗಳೂರು-ಮುರ್ಡೇಶ...