New Delhi,Bengaluru, ಮಾರ್ಚ್ 20 -- Indian Railways big update: ರೈಲು ಪ್ರಯಾಣದ ವೇಳೆ ಲೋವರ್ ಬರ್ತ್ ರಿಸರ್ವೇಶನ್ ಮಾಡುವುದು ಬಹಳ ತ್ರಾಸದ ಕೆಲಸ. ಭಾರತೀಯ ರೈಲ್ವೆ ಲೋವರ್ ಬರ್ತ್ ಹಂಚಿಕೆ ಹೇಗೆ ಮಾಡುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ತಲೆಕೆರೆದುಕೊಂಡು ಲೆಕ್ಕಾಚಾರ ಹಾಕಿದವರಿಗೆ ಹಾಗೂ ತಲೆಕೆರೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯೇನಲ್ಲ. ಈ ಲೋವರ್ ಬರ್ತ್ ಹಂಚಿಕೆ (Lower Birth Allocation) ವಿಚಾರವಾಗಿ ಭಾರತೀಯ ರೈಲ್ವೆಯ ಬಿಗ್ ಅಪ್ಡೇಟ್ ಬಹಿರಂಗವಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಬೆನ್ನಿಗೆ ಭಾರತೀಯ ರೈಲ್ವೆ ಕೂಡ ಈ ವಿಷಯದ ಬಗ್ಗೆ ಟ್ವೀಟ್ ಮಾಡಿದೆ.

ಲೋಕಸಭೆ ಕಲಾಪದ ವೇಳೆ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲುಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷ ಸಾಮರ್ಥ್ಯದ ಜನರಿಗೆ ಲೋವರ್ ಬರ್ತ್ ಒದಗಿಸುವುದಕ್ಕೆ ಭಾರತೀಯ ರೈಲ್ವೆ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

ಹ...