ಭಾರತ, ಏಪ್ರಿಲ್ 30 -- ಬೆಂಗಳೂರು: ಪಠ್ಯಪುಸ್ತಕ, ಸಾಹಿತ್ಯ ಪುಸ್ತಕಗಳು, ಗೈಡ್‌ಗಳನ್ನು ಕಳುಹಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ಆರಂಭಿಸಿದ್ದ 'ಜ್ಞಾನ ಅಂಚೆ' ಸೇವೆ ಮೇ 1 ರಿಂದ ಪ್ರಾರಂಭವಾಗಲಿದೆ.

ಮೊದಲೆಲ್ಲಾ ಈ ಪುಸ್ತಕಗಳನ್ನು ಭಾರತೀಯ ಅಂಚೆ ಇಲಾಖೆಯ ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್‌ ಸೇವೆಗಳ ಮೂಲಕ ಕಳುಹಿಸಬೇಕಿತ್ತು. 2023ರಲ್ಲಿ ಭಾರತೀಯ ಅಂಚೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 2024ರಲ್ಲಿ ಬುಕ್ ಪ್ಯಾಕೆಟ್ ಸೇವೆಯನ್ನು ರದ್ದು ಮಾಡಲಾಗಿತ್ತು. ಬುಕ್ ಪೋಸ್ಟ್ ಸೇವೆಯ ಹೆಸರು ಬದಲಾವಣೆಯೊಂದಿಗೆ ದರವನ್ನು ಕೂಡ ಹೆಚ್ಚಳ ಮಾಡಲಾಗಿತ್ತು.

ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ರದ್ಧತಿಯಿಂದ ಸಾಹಿತ್ಯ ಪುಸ್ತಕಗಳನ್ನು ಕಳುಹಿಸಲು ಕಷ್ಟಸಾಧ್ಯವಾಗಿತ್ತು. ಇದರ ಬಗ್ಗೆ ಪುಸ್ತಕ ಪ್ರಕಾಶಕರು ಹಾಗೂ ಪ್ರಕಾಶಕ ಸಂಘದವರು ಅಸಮಾಧಾನ ಹೊರ ಹಾಕಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಂಚೆ ಇಲಾಖೆಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈಗ ಪುನಃ ಭಾರತೀಯ ಅಂಚೆ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು ಕೇಂದ್ರ ಸರ್ಕಾರ...