ಭಾರತ, ಫೆಬ್ರವರಿ 24 -- India Post GDS Recruitment 2025: ಭಾರತೀಯ ಅಂಚೆಯ ಗ್ರಾಮೀಣ ಡಾಕ್ ಸೇವಕ್ ವಿಭಾಗದ 21,413 ಹುದ್ದೆಗಳ ಭರ್ತಿಗೆ ನೇಮಕಾತಿ ಶುರುವಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 3 ಕೊನೇ ದಿನವಾಗಿದ್ದು, ಎಕ್ಸಾಂ, ಇಂಟರ್‌ವ್ಯೂ ಏನೂ ಇಲ್ಲ, 10 ನೇ ಕ್ಲಾಸ್ ಪಾಸಾಗಿದ್ರೆ ಸಾಕು. ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂಬುದೇ ಗಮನಸೆಳೆಯುವ ಅಂಶ. ಅವರವರ ಊರಿನಲ್ಲೇ ಅಂಚೆ ಇಲಾಖೆ ಉದ್ಯೋಗ ಮಾಡಿಕೊಂಡು ಇರಬಹುದು.

ಸಾಮಾನ್ಯರಿಗೆ 482, ಒಬಿಸಿ 260, ಎಸ್‌ಸಿ ಕೆಟಗರಿಗೆ 175, ಎಸ್‌ಟಿ ಕೆಟಗರಿಗೆ 78, ಇಡಬ್ಲ್ಯುಎಸ್‌ಗೆ 122 ಮತ್ತು ಇತರೆ 18 ಹುದ್ದೆಗಳು ಸೇರಿ ಒಟ್ಟು ಕರ್ನಾಟಕ ಸರ್ಕಲ್‌ನಲ್ಲಿ 1135 ಹುದ್ದೆಗಳಿವೆ.

ಬೆಂಗಳೂರು ಜಿಪಿಒ ಡಿವಿಷನ್‌ - 3 ಹುದ್ದೆ, ಬೆಂಗಳೂರು ಪೂರ್ವ ಡಿವಿಷನ್ 46 ಹುದ್ದೆ, ಬೆಂಗಳೂರು ದಕ್ಷಿಣ 40 ಹುದ್ದೆ, ಬೆಂಗಳೂರು ಪಶ್ಚಿಮ 13 ಹುದ್ದೆ, ಬೀದರ್ ಡಿವಿಷನ್ 24 ಹುದ್ದೆ, ಬಾಗಲಕೋಟೆ ಡಿವಿಷನ್ - 24 ಹುದ್ದೆ, ಬಳ್ಳಾರಿ ಡಿವಿಷನ್ 41 ಹುದ್ದೆ, ಬೆಳಗಾ...