Bengaluru, ಮಾರ್ಚ್ 19 -- Gold Business in Dubai: ಸದ್ಯ ನಟಿ ರನ್ಯಾ ರಾವ್ ಮತ್ತು ನಟ ತರುಣ್‌ ರಾಜು ಅವರನ್ನೊಳಗೊಂಡ ಚಿನ್ನ ಕಳ್ಳಸಾಗಣೆ ಕೇಸ್‌ ಕಡೆಗೆ ಎಲ್ಲರ ಗಮನ ನೆಟ್ಟಿದೆ. ಹೈಪ್ರೊಫೈಲ್ ಕೇಸ್ ಆಗಿರುವ ಕಾರಣ, ಪ್ರತಿಯೊಂದು ಅಂಶವೂ ಗಮನಸೆಳೆಯುತ್ತಿದೆ. ಈ ಪೈಕಿ ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಮತ್ತು ಆಕೆಯ ಸ್ನೇಹಿತ ತರುಣ್ ರಾಜು ದುಬೈನಲ್ಲಿ ಗೋಲ್ಡ್ ಕಂಪನಿ ಹೊಂದಿದ್ದಾರೆ ಎಂಬುದು ಮುಖ್ಯವಾದುದು. ಹಾಗಾದರೆ, ದುಬೈನಲ್ಲಿ ಗೋಲ್ಡ್ ಕಂಪನಿ ತೆರೆಯೋದು ಸುಲಭವಾ, ಅಲ್ಲಿ ಚಿನ್ನದ ಅಂಗಡಿ ತೆರೆಯುವುದುಕ್ಕೆ ಎಷ್ಟು ಹಣ ಹೂಡಿಕೆ ಮಾಡಬೇಕು, ದುಬೈನಲ್ಲಿ ಗೋಲ್ಡ್ ಕಂಪನಿ ತೆರೆಯೋದಕ್ಕೆ ಇರುವ ನಿಯಮಗಳೇನು ಎಂಬ ವಿವರಗಳ ಕಡೆಗೆ ಗಮನಹರಿಸೋಣ.

ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಮತ್ತು ಆಕೆಯ ಸ್ನೇಹಿತ ತರುಣ್ ರಾಜು ದುಬೈನಲ್ಲಿ ಗೋಲ್ಡ್ ಕಂಪನಿ ಹೊಂದಿದ್ದಾರೆ ಎಂಬ ಮಾಹಿತಿಯಷ್ಟೇ ಬಹಿರಂಗವಾಗಿದೆ. ದುಬೈನಲ್ಲಿ ರನ್ಯಾ ರಾವ್ ಮತ್ತು ತರುಣ್ ರಾಜು ಅವರ ಗೋಲ್ಡ್ ಕಂ...