Bengaluru, ಫೆಬ್ರವರಿ 26 -- ಬೆಂಗಳೂರು: ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿ ಮತ್ತೆ ಕುಳಿತುಕೊಂಡಿರುವ ಡೊನಾಲ್ಡ್‌ ಟ್ರಂಪ್‌ ಬತ್ತಳಿಕೆಯಿಂದ ಹೊಸಹೊಸ ಅಸ್ತ್ರಗಳು, ಯೋಜನೆಗಳು, ಘೋಷಣೆಗಳು ಹೊರಬರುತ್ತಿವೆ. ಮಂಗಳವಾರ ಟ್ರಂಪ್‌ ಪ್ರಕಟಿಸಿರುವ ಗೋಲ್ಡ್‌ ಕಾರ್ಡ್‌ ವೀಸಾವು ಇದಕ್ಕೆ ಹೊಸ ಸೇರ್ಪಡೆ. ವೀಸಾವನ್ನು ಸುಲಭವಾಗಿ ಹಣ ನೀಡಿ ಪಡೆಯಲು ಬಯಸುವ ಅಗರ್ಭ ಶ್ರೀಮಂತರಿಗೆ ಈ ಗೋಲ್ಡ್‌ ಕಾರ್ಡ್‌ ವೀಸಾ ಖುಷಿ ತರಬಹುದು. ಅಮೆರಿಕದ ಪೌರತ್ವವನ್ನು ಸುಲಭವಾಗಿ ಪಡೆಯಲು ಇದು ದಾರಿಯಾಗಲಿದೆ. ಆದರೆ, ಈ 5 ದಶಲಕ್ಷ ಡಾಲರ್‌ನ ಗೋಲ್ಡ್‌ ಕಾರ್ಡ್‌ ವೀಸಾ ಯೋಜನೆಯು ಗ್ರೀನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವ ಭಾರತೀಯ ಪ್ರಜೆಗಳಿಗೆ ಕಳವಳ ತಂದಿದೆ.

ಅಮೆರಿಕದ ವೀಸಾ ಪಡೆಯಲು ಬಯಸುವ ವಲಸಿಗರಿಗೆ "5 ದಶಲಕ್ಷ ಡಾಲರ್‌ ನೀಡಿ, ಗೋಲ್ಡ್‌ ಕಾರ್ಡ್‌ ಪಡೆಯಿರಿ" ಎಂಬ ಹೊಸ ಆಫರ್‌ ಪ್ರಕಟಿಸಿದ್ದಾರೆ. 35 ವರ್ಷ ಹಳೆಯದಾದ ಇಬಿ-5 ಹೂಡಿಕೆದಾರರ ವೀಸಾದ ಬದಲಿಗೆ 5 ದಶಲಕ್ಷ ಡಾಲರ್‌ ಮೊತ್ತ ನೀಡಿ ಗೋಲ್ಡ್‌ ಕಾರ್ಡ್‌ ಪಡೆಯುವ ಯೋಜನೆ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿ...