ಭಾರತ, ಏಪ್ರಿಲ್ 27 -- ಭಾರತದಲ್ಲಿ ರೈಲು ಪ್ರಯಾಣವೇ ಒಂದು ಸುಂದರ ಅನುಭವ. ಪ್ರವಾಸಕ್ಕೆಂದು ರೈಲು ಪ್ರಯಾಣ ಮಾಡುವುದಿದ್ದರೆ, ರೈಲಿನ ಪ್ರಯಾಣದ ಸಮಯದಲ್ಲೇ ಹಲವು ಪ್ರವಾಸಿ ಸ್ಥಳವನ್ನು ಸವಿಯಬಹುದು. ಅಲ್ಲದೆ ಭಾರತದ ಸುಂದರ ಭೂದೃಶ್ಯಗಳಿಗೆ ಸಾಕ್ಷಿಯಾಗಬಹುದು. ರೈಲು ಪ್ರಯಾಣವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ದೂರದ ಪ್ರಯಾಣಕ್ಕೆ ಹಾಗೂ ಕಡಿಮೆ ಬಜೆಟ್‌ನಲ್ಲಿ ಪ್ರಯಾಣಿಸುವವರು ರೈಲಿನಲ್ಲೇ ಪ್ರಯಾಣಿಸಲು ಹೆಚ್ಚು ಆದ್ಯತೆ ನೀಡುತ್ತಾರೆ. ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಹಾಗೂ ಜನಸಂಖ್ಯೆಯೂ ಹೆಚ್ಚಿರುವ ಭಾರತ ದೇಶಕ್ಕೆ, ರೈಲು ಪ್ರಯಾಣ ಹೆಚ್ಚು ಹೊಂದಿಕೆಯಾಗುತ್ತದೆ. ಇದೇ ಕಾರಣದಿಂದ ಭಾರತದ ಮೂಲೆ ಮೂಲೆಗೂ ರೈಲು ಸಂಪರ್ಕವಿದೆ. ದೇಶದಲ್ಲಿ ಕೆಲವೊಂದು ರೈಲು ಮಾರ್ಗಗಳು ಅತಿ ಉದ್ದವಾಗಿವೆ. ಈ ಮಾರ್ಗಗಳಲ್ಲಿ ಪ್ರಯಾಣಿಸಲು ಹೆಚ್ಚು ಸಮಯವೂ ಬೇಕಾಗುತ್ತದೆ. ಭಾರತದ ಅತಿ ಉದ್ದದ 10 ರೈಲು ಮಾರ್ಗಗಳ ವಿವರ ಇಲ್ಲಿದೆ.

ಭಾರತದ ಅತಿ ಉದ್ದದ ರೈಲು ಮಾರ್ಗಗಳ ಪಟ್ಟಿಯಲ್ಲಿ ಮೊದಲ ಸ್ಥಾನ ವಿವೇಕ್ ಎಕ್ಸ್‌ಪ್ರೆಸ್‌ಗೆ. ದೇಶದ ಅತಿ ಉದ್ದದ ರೈಲು ಮಾ...