ಭಾರತ, ಮೇ 13 -- ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯು ಕೃಷಿಯ ಮೇಲೂ ಪರಿಣಾಮ ಬೀರಿಲ್ಲ ಎಂದಿಲ್ಲ. ಕೃಷಿ ತಂತ್ರಜ್ಞಾನವು ವಿವಿಧ ರೀತಿಯ ಬೆಳೆಗಳಲ್ಲಿ ಹೊಸ ಹೊಸ ಆವಿಷ್ಕಾರವನ್ನು ಮಾಡುತ್ತಿರುತ್ತದೆ, ಅದಕ್ಕೆ ಮಾವು ಕೂಡ ಹೊರತಾಗಿಲ್ಲ. ಭಾರತೀಯ ಕೃಷಿ ವಿಜ್ಞಾನಿಗಳು ಮತ್ತು ತೋಟಗಾರಿಕಾ ತಜ್ಞರು ಇಳುವರಿ, ರೋಗ ನಿರೋಧಕ ಅಂಶ ಮತ್ತು ಸುವಾಸನೆಯನ್ನು ಹೆಚ್ಚಿಸಲು ಹಲವಾರು ಹೊಸ ಮಾವಿನ ಪ್ರಭೇದಗಳನ್ನು ಪರಿಚಯಿಸಿದ್ದಾರೆ. ಅಂತಹ 5 ಅಪರೂಪದ ಮಾವಿನ ತಳಿಗಳ ಬಗ್ಗೆ ಇಲ್ಲಿದೆ ಮಾಹಿತಿ. ನೀವಿನ್ನೂ ಇದರ ರುಚಿ ನೋಡಿಲ್ಲ ಅಂದ್ರೆ ಟ್ರೈ ಮಾಡಿ.

ಅರುಣಿಕಾ: ಹೆಸರು ಮಾತ್ರವಲ್ಲ ಈ ಮಾವಿನ ಹಣ್ಣಿನ ರುಚಿ ಕೂಡ ಸಖತ್‌ ಆಗಿದೆ. 2008 ರ ಹೊತ್ತಿಗೆ ಬಿಡುಗಡೆಯಾದ ಈ ಮಾವಿನ ತಳಿಯನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಆಮ್ರಪಾಲಿ ಮತ್ತು ವನರಾಜ್ ಮಾವಿನ ಪ್ರಭೇದಗಳನ್ನು ಮಿಶ್ರತಳಿ ಮಾಡುವ ಮೂಲಕ ಅಭಿವೃದ್ಧಿಪಡಿಸಿದ ಹೈಬ್ರಿಡ್ ಹಣ್ಣು. ಇದು ಕೆಂಪು ಸಿಪ್ಪೆ ಹಾಗೂ ಸಿಹಿ ಸುವಾಸನೆಯನ್ನು ಹೊಂದಿರುತ್ತದೆ.

ಆನಂದ್‌ ರಸರಾಜ್‌: 2022 ರಲ್ಲಿ ಗುಜರಾತ...