ಭಾರತ, ಮೇ 30 -- ಭಾರತವಿನ್ನೂ ದಾಸ್ಯದಲ್ಲಿದ್ದಾಗಲೇ 'ಭಾರತಾಂಬೆ ತನ್ನ ಸುಖ ನಿದ್ರೆಯಿಂದ ಎಚ್ಚರಗೊಳ್ಳುತ್ತಿದ್ದಾಳೆ, ಇನ್ನು ಆಕೆಯನ್ನು ತಡೆಯಲಾಗದು, ಆಕೆ ಮತ್ತೆ ನಿದ್ರಿಸುವ ಮಾತೇ ಇಲ್ಲ, ಯಾವ ಹೊರಗಿನ ಶಕ್ತಿಗಳು ಆಕೆಯನ್ನು ಇನ್ನು ತಡೆಯಲಾರವು. ಏಕೆಂದರೆ ಈ ಮಹಾ ಶಕ್ತಿ ಎಚ್ಚೆತ್ತು ತನ್ನ ಕಾಲ ಮೇಲೆ ತಾನು ನಿಲ್ಲುತ್ತಿದ್ದಾಳೆ' ಎಂದು ಸ್ವಾಮಿ ವಿವೇಕಾನಂದರು ಘೋಷಿಸಿದ್ದರು. ಅವರು ಅ೦ದು ನುಡಿದ ಭವಿಷ್ಯ ನಿಜವಾಗುತ್ತಿದೆ. ಭಾರತ ತನ್ನ ಕಾಲ ಮೇಲೆ ತಾನು ನಿ೦ತಿದೆ. ಜಾಗೃತವಾದ ಭಾರತ ವಿಶ್ವಗುರುವಾಗಬೇಕಿದೆ. ಇದಕ್ಕಾಗಿ ಪಾವಿತ್ರ್ಯೆಯ ಕೆಚ್ಚು, ನಂಬಿರುವ ಭಗವಂತನಲ್ಲಿ ಅಪರಿಮಿತ ವಿಶ್ವಾಸ ಇದಲ್ಲಕ್ಕಿಂತ ಮುಖ್ಯವಾಗಿ ದೇಶಪ್ರೇಮ ತುಂಬಿರುವ ಪುರುಷ ಸಿಂಹರ ನಿರ್ಮಾಣ ಬಹು ದೊಡ್ಡ ಸಂಖ್ಯೆಯಲ್ಲಿ ಬೇಕಿದೆ. ಆದರೆ ಶತಶತಮಾನಗಳ ನಿಷ್ಕ್ರಿಯತೆಯೋ ಅಥವಾ ಸ್ವಾತಂತ್ರ್ಯಾನಂತರವೂ ನಾವು ಪಾಲಿಸಿಕೊಂಡು ಬಂದ ಕಾರಕೂನ ಸ್ವಭಾವವನ್ನೇ ಪ್ರಚೋದಿಸುವ ಶಿಕ್ಷಣ ಪದ್ಧತಿಯೋ ಅಂತೂ ನಾವಿನ್ನೂ ಗೊoದಲ ಸ್ಥಿತಿಯಲ್ಲಿಯೇ ಮುಂದುವರೆದಿದ್ದೇವೆ. ಆದರೆ ನಾವೀಗ ಬ...