ಭಾರತ, ಮಾರ್ಚ್ 8 -- ಕಳೆದ ವರ್ಷ ಫುಟ್ಬಾಲ್​ಗೆ ವಿದಾಯ ಹೇಳಿದ್ದ ಅನುಭವಿ ಫುಟ್ಬಾಲ್ ಆಟಗಾರ ಮತ್ತು ಭಾರತದ ಮಾಜಿ ನಾಯಕ ಸುನಿಲ್ ಛೆಟ್ರಿ ಅವರು ಇದೀಗ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ತಮ್ಮ ನಿವೃತ್ತಿ ಹಿಂಪಡೆದು ಇದೇ ತಿಂಗಳು ನಡೆಯುವ ಪಂದ್ಯಗಳಿಗೆ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ಎಎಫ್‌ಸಿ ಏಷ್ಯನ್ ಕಪ್ 2027 ಅರ್ಹತಾ ಸುತ್ತಿನ ಅಂತಿಮ ಸುತ್ತಿನ ತಯಾರಿಯ ಭಾಗವಾಗಿ ಭಾರತ ತಂಡ ಮಾರ್ಚ್ 19 ರಂದು ಮಾಲ್ಡೀವ್ಸ್ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಸೆಣಸಲಿದೆ. ನಂತರ ಮಾರ್ಚ್ 25ರಂದು ಅರ್ಹತಾ ಸುತ್ತಿನ 3ನೇ ರೌಂಡ್​ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಛೆಟ್ರಿ ಈ ಹಿಂದೆ ಕಳೆದ ವರ್ಷ ಮೇ ತಿಂಗಳಲ್ಲಿ ಫುಟ್ಬಾಲ್​ಗೆ ನಿವೃತ್ತಿ ಘೋಷಿಸಿದ್ದರು.

ಇದೇ ತಿಂಗಳಿಂದ ಆರಂಭವಾಗುವ ಫಿಫಾ ಅಂತಾರಾಷ್ಟ್ರೀಯ ಫುಟ್ಬಾಲ್​ ಪಂದ್ಯಗಳಲ್ಲಿ ಭಾರತಕ್ಕೆ ನೆರವಾಗಲು ನಿವೃತ್ತಿಯಿಂದ ಹೊರಬರಲು ಸುನಿಲ್ ಛೆಟ್ರಿ ನಿರ್ಧರಿಸಿದ್ದಾರೆ ಎಂದು ಎಐಎಫ್ಎಫ್ ಪ್ರಕಟಿಸಿದೆ. ಚೆಟ್ರಿ ಫುಟ್ಬಾಲ್ ಅಂಗಳ...