ಭಾರತ, ಮಾರ್ಚ್ 10 -- ದುಬೈನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ತನ್ನ ಸಿಇಒ ಮತ್ತು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಿರ್ದೇಶಕ ಸುಮೈರ್ ಅಹ್ಮದ್ ಸೈಯದ್ ಅವರನ್ನು ನಿರ್ಲಕ್ಷಿಸಿದ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ಗೆ ತನ್ನ ಪ್ರತಿಭಟನೆ ದಾಖಲಿಸಲಿದೆ. ಐಸಿಸಿ ನೀಡಿದ ವಿವರಣೆಯಿಂದ ಅಧ್ಯಕ್ಷ ಮೊಹ್ಸಿನ್ ನಖ್ವಿ ತೃಪ್ತರಾಗಿಲ್ಲ ಎಂದು ಪಿಸಿಬಿ ಮೂಲಗಳು ಸೋಮವಾರ (ಮಾ 10) ಪಿಟಿಐಗೆ ತಿಳಿಸಿವೆ. ಫೈನಲ್​​ನಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸುವ ಮೂಲಕ ಭಾರತ ಪ್ರಶಸ್ತಿ ಗೆದ್ದುಕೊಂಡಿತು.

ಮೊಹ್ಸಿನ್ ನಖ್ವಿ ಅವರು ವೇದಿಕೆಗೆ ಬರಲು ವ್ಯವಸ್ಥೆ ಮಾಡಲಾಗಿತ್ತು ಎಂದು ಐಸಿಸಿ ಸ್ಪಷ್ಟಪಡಿಸಿದೆ. ಆದ್ದರಿಂದ ಅವರು ಫೈನಲ್​ಗೆ ಬರದ ಕಾರಣ ತಮ್ಮ ಯೋಜನೆಗಳನ್ನು ಬದಲಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಪಿಸಿಬಿ ಈ ವಿವರಣೆ ತಿರಸ್ಕರಿಸಿದೆ. ಟೂರ್ನಿಯ ಸಮಯದಲ್ಲಿ ಆತಿಥೇಯ ರಾಷ್ಟ್ರವಾಗಿ ಪಾಕಿಸ್ತಾನದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಐಸಿಸಿ ಅನೇಕ ತಪ್ಪುಗಳನ್ನು ಮಾಡ...