ಭಾರತ, ಮಾರ್ಚ್ 25 -- ಆಸ್ಟ್ರೇಲಿಯಾದ ದಿ ಗಬ್ಬಾ ಸ್ಟೇಡಿಯಂ ಹೆಸರು ಹೇಳಿದಾಗಲೇ, ಭಾರತದ 2021ರ ಐತಿಹಾಸಿಕ ಟೆಸ್ಟ್ ಗೆಲುವು ನೆನಪಿಗೆ ಬರುತ್ತದೆ. ಬ್ರಿಸ್ಬೇನ್‌ ನಗರದಲ್ಲಿರುವ ಸ್ಟೇಡಿಯಂ ಅನ್ನು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಸರ್ಕಾರ ಕೆಡವಲು ಮುಂದಾಗಿದೆ. ಇದಕ್ಕೆ ಕಾರಣ 2032ರ ಒಲಿಂಪಿಕ್ಸ್‌. ಕ್ರೀಡೆಯಲ್ಲಿ ಭಾರಿ ಮುಂಚೂಣಿಯಲ್ಲಿರುವ ಆಸ್ಟ್ರೇಲಿಯಾ, 2023ರ ಒಲಿಂಪಿಕ್ಸ್ ಆತಿಥ್ಯಕ್ಕೆ ಸಜ್ಜಾಗಿದೆ. ಹೀಗಾಗಿ ಕ್ವೀನ್ಸ್‌ಲ್ಯಾಂಡ್ ಸರ್ಕಾರದ ಯೋಜನೆಯ ಭಾಗವಾಗಿ ದಿ ಗಬ್ಬಾ ಎಂದು ಕರೆಯಲ್ಪಡುವ ಬ್ರಿಸ್ಬೇನ್ ಕ್ರಿಕೆಟ್ ಮೈದಾನವನ್ನು ನೆಲಸಮಗೊಳಿಸಲು ಸಜ್ಜಾಗಿದೆ. ಇದಕ್ಕಾಗಿ ಏಳು ವರ್ಷಗಳ ನೀಲನಕ್ಷೆ ಸಿದ್ದಪಡಿಸಿದೆ.

ಕ್ವೀನ್ಸ್‌ಲ್ಯಾಂಡ್‌ನ ರಾಜಧಾನಿಯಾಗಿರುವ ಬ್ರಿಸ್ಬೇನ್‌ ನಗರದಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಎರಡು ಬಾರಿ ಒಲಿಂಪಿಕ್ಸ್‌ ನಡೆಯಲಿದೆ. 1956ರ ಮೆಲ್ಬೋರ್ನ್ ಮತ್ತು 2000ದಲ್ಲಿ ಸಿಡ್ನಿ ಒಲಿಂಪಿಕ್ಸ್‌ ನಡೆದಿತ್ತು. ಅದಾದ ಬಳಿಕ ಇದು ಮೂರನೇ ಬಾರಿಗೆ ಆಸ್ಟ್ರ...