ಭಾರತ, ಏಪ್ರಿಲ್ 15 -- Sachkhand Express: ಭಾರತದ ರೈಲಿನಲ್ಲಿ ಉಪಾಹಾರ, ಊಟ ಉಚಿತವಾಗಿ ನೀಡಲಾಗುತ್ತಿದೆ ಎಂಬ ವಿಚಾರ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿದೇಶಿಯರೊಬ್ಬರು ಈ ವಿಡಿಯೋ ಹಂಚಿಕೊಂಡ ಕಾರಣ ಇದ್ಯಾವ ರೈಲು ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅವರು ಈ ವ್ಯವಸ್ಥೆಯಿಂದ ಬಹಳ ಪ್ರಭಾವಿತರಾಗಿ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಸಚ್‌ಖಂಡ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಚಾಲ್ತಿಯಲ್ಲಿರುವ ವ್ಯವಸ್ಥೆ. ದರಲ್ಲಿ ಉಪಾಹಾರ, ಊಟ ಉಚಿತ ಎಂಬುದು ಸತ್ಯ. ಆದರೆ ಈ ಉಚಿತ ಊಟೋಪಹಾರ ಪೂರೈಕೆಯ ಖರ್ಚು ವೆಚ್ಚಗಳನ್ನು ಭರಿಸುತ್ತಿರುವುದು ಭಾರತೀಯ ರೈಲ್ವೆ ಅಲ್ಲ. ಇನ್ಯಾರು ಎಂಬ ಕುತೂಹಲ ತಣಿಸುವ ಪ್ರಯತ್ನ ಇದು.

ಭಾರತೀಯ ರೈಲ್ವೆಯಲ್ಲಿ ಅಗ್ಗದ ದರದಲ್ಲಿ ಉತ್ತಮ ಆಹಾರ ಪೂರೈಸುವ ವ್ಯವಸ್ಥೆ ಇದೆ. ಐಆರ್‌ಸಿಟಿಸಿ ಮತ್ತು ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯವಾಗಿ ಹಾಗೂ ಫುಡ್ ಆಪ್‌ಗಳ ಮೂಲಕ ಆಹಾರ ಪೂರೈಕೆ ಆಗುತ್ತಿರುವುದು ಗೊತ್ತೇ ಇದೆ. ಆದರೆ, ಈ ಒಂದು ರೈಲಿನಲ್ಲಿ ಮಾತ್ರ ಉಚಿತ...