ಭಾರತ, ಏಪ್ರಿಲ್ 24 -- ನವದೆಹಲಿ: ಭಾರತವು ಉಗ್ರರನ್ನು ಗುರುತಿಸಿ, ಹುಡುಕಿ, ಶಿಕ್ಷಿಸಲಿದೆ. ಅವರನ್ನು ಈ ಭೂಮಿಯಿಂದ ಅಂತ್ಯಗೊಳಿಸಲು ಬದ್ಧರಾಗಿದ್ದೇವೆ. ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ. ನ್ಯಾಯಕ್ಕಾಗಿ ಏನೆಲ್ಲಾ ಮಾಡಬೇಕೋ ಎಲ್ಲವನ್ನೂ ಮಾಡುತ್ತೇವೆ. ಮಾನವೀಯತೆಯನ್ನು ನಂಬುವವರೆಲ್ಲರೂ ನಮ್ಮೊಡನೆ ಇದ್ದಾರೆ. ಜೊತೆಗೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಭಾರತದ ಆತ್ಮವನ್ನು ಅಲುಗಾಡಿಸಲು ಭಯೋತ್ಪಾದನೆಗೆ ಎಂದಿಗೂ ಸಾಧ್ಯವಿಲ್ಲ.
ಪಹಲ್ಗಾಮ್‌ನಲ್ಲಿ ಮುಗ್ಧರನ್ನು ಕೊಂದ ಭಯೋತ್ಪಾದಕರು ಎಲ್ಲಿ ಅಡಗಿದ್ದರೂ ಬೇಟೆಯಾಡದೆ ಬಿಡುವುದಿಲ್ಲ. ಭಯೋತ್ಪಾದನೆಗೆ ಬಳಸಿದ ಸ್ಥಳವನ್ನೂ ನಿರ್ನಾಮ ಮಾಡುತ್ತೇವೆ. ಭಾರತದ ಹಲವು ರಾಜ್ಯಗಳ ಜನರು ಪಹಲ್ಗಾಮ್‌ನಲ್ಲಿ ಜೀವ ತೆತ್ತಿದ್ದಾರೆ. ಈ ದಾಳಿ ನಡೆಸಿದವರು, ಅವರಿಗೆ ಕುಮ್ಮಕ್ಕು ಕೊಟ್ಟವರಿಗೆ ಅವರು ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಶಿಕ್ಷೆ ಸಿಗಲಿದೆ. ಈ ಬಾರಿ ಒಂದು ಸಲದ ಶಿಕ್ಷೆಯಷ್ಟೇ ಅಲ್ಲ, ಅವರು ದೀರ್ಘಕಾಲ ಶಿಕ್ಷೆ ಅನುಭವಿಸಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
(ಮಾಹಿತಿ ...
Click here to read full article from source
To read the full article or to get the complete feed from this publication, please
Contact Us.