ಭಾರತ, ಏಪ್ರಿಲ್ 27 -- ಮದ್ಯ ಎಂದರೆ ಅದು ಪುರುಷರಿಗಷ್ಟೇ ಸೀಮಿತ ಎಂಬುದು ಹಳೆಯ ಕಾಲದ ಮಾತು. ಆಧುನಿಕತೆಯತ್ತ ಒಗ್ಗಿಕೊಳ್ಳುತ್ತಿರುವ ಯುವ ಜನತೆಯಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಯಾವುದೇ ಕ್ಷೇತ್ರದಲ್ಲೂ ಪುರುಷ ಸಮನಾಗಿ ಮಹಿಳೆಯರು ಸ್ಪರ್ಧೆ ಒಡ್ಡುತ್ತಾರೆ. ಇದು ಮದ್ಯದ ವಿಷಯದಲ್ಲೂ ಅಷ್ಟೇ. ಭಾರತೀಯರು ಮದ್ಯದತ್ತ ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಕೆಲವು ರಾಜ್ಯಗಳಲ್ಲಿ ಮಹಿಳೆಯರು ಕೂಡಾ ಹೆಚ್ಚು ಪ್ರಮಾಣದಲ್ಲಿ ಮದ್ಯ ಸೇವಿಸುತ್ತಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ವರದಿ ಪ್ರಕಾರ, ಭಾರತದ ಕೆಲವು ರಾಜ್ಯಗಳಲ್ಲಿ ಮದ್ಯಪಾನ ಮಾಡುವ ಮಹಿಳೆಯರ ಪ್ರಮಾಣ ಅತ್ಯಧಿಕವಾಗಿದೆ. ಅ ರಾಜ್ಯಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಪ್ರಾದೇಶಿಕ ಸಂಸ್ಕೃತಿ, ಬದಲಾಗುತ್ತಿರುವ ಜೀವನಶೈಲಿ, ಕೆಲವೊಂದು ಬುಡಕಟ್ಟು ಸಂಪ್ರದಾಯಗಳು ಸೇರಿದಂತೆ ಕೆಲವೊಂದು ಅಂಶಗಳು ಈ ಪ್ರವೃತ್ತಿಗೆ ಕಾರಣ ಎಂದು ಹೇಳಲಾಗುತ್ತದೆ. ಕೆಲವು ಬುಡಕಟ್ಟು ಪ್ರಾಬಲ್ಯದ ರಾಜ್ಯಗಳಲ್ಲಿ ಮದ್ಯಪಾನವು ದೈನಂದಿನ ಜೀವನ ಮತ್ತು ಸಾಮಾಜಿಕ ಆಚರಣೆಗಳ ಭಾಗವಾಗಿದೆ....