ಭಾರತ, ಫೆಬ್ರವರಿ 2 -- ಮುಂದಿನ 6-7 ತಿಂಗಳೊಳಗೆ ವೊಡಾಫೋನ್ ಐಡಿಯಾ (Vodafone Idea-Vi) ಭಾರತದಲ್ಲಿ ತನ್ನ 5G ಸೇವೆಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ವೊಡಾಫೋನ್ ಐಡಿಯಾ ಪ್ರತಿಸ್ಪರ್ಧಿಗಳು ಈಗಾಗಲೇ ದೇಶದಾದ್ಯಂತ 5ಜಿ ಸೇವೆಗಳನ್ನು ಒದಗಿಸಿದ್ದು, ಎಷ್ಟರ ಮಟ್ಟಿಗೆ ವೊಡಾಫೋನ್ ಐಡಿಯಾಗೆ ಯಶಸ್ಸು ಸಿಗುತ್ತದೆ ಎಂದು ನೋಡಬೇಕಾಗಿದೆ.

ಕಂಪನಿಯ ಮೂರನೇ ತ್ರೈಮಾಸಿಕ ಗಳಿಕೆಯ ವರದಿ ನೀಡುವ ವೇಳೆ ವೊಡಾಫೋನ್ ಐಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ ಮೂಂದ್ರಾ ಅವರು 5G ಸೇವೆ ಘೋಷಣೆಯನ್ನು ಮಾಡಿದ್ದಾರೆ. ವೊಡಾಫೋನ್ ಐಡಿಯಾ ಕಂಪನಿಯ ಘೋಷಣೆ ಬೆನ್ನಲ್ಲೇ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು ಶೀಘ್ರದಲ್ಲೇ ತಮ್ಮ 5ಜಿ ಪ್ಲಾನ್​​ನ ಬೆಲೆಯಲ್ಲಿ ಬದಲಾವಣೆ ಮಾಡಲು ಮುಂದಾಗಿವೆ ಎಂದು ವರದಿಯಾಗುತ್ತಿದೆ. ಆದರೆ ಈ ಬೆಳವಣಿಗೆಗಳನ್ನು ಜಿಯೋ ಅಥವಾ ಏರ್​ಟೆಲ್​ ಕಂಪನಿಯು ಅಧಿಕೃತವಾಗಿ ದೃಢಪಡಿಸಿಲ್ಲ.

ದೇಶದಲ್ಲಿ 5G ರೋಲ್‌ಔಟ್‌ಗಾಗಿ ತನ್ನ ಕಾರ್ಯತಂತ್ರವನ್ನು ಅಂತಿಮಗೊಳಿಸಲು ವೊಡಾಫೋನ್ ಐಡಿಯಾ ಕಂಪನಿಯು ತಂತ್ರಜ್ಞಾನ ಪಾಲುದಾರರ...