ಭಾರತ, ಮೇ 6 -- ಮೆಮೊಪ್ಲಾಸ್ಟಿ (Reduction Mammoplasty) ಅಥವಾ ಸ್ತನ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆ (Breast Reduction Surgery) ಇತ್ತೀಚಿಗೆ ಪ್ರಚಲಿತದಲ್ಲಿರುವ ವಿಚಾರ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸ್ತನ ಗಾತ್ರ ಕುಗ್ಗಿಸುವ ಮೆಮೊಪ್ಲಾಸ್ಟಿ ಶಸ್ತ್ರಚಿಕಿತ್ಸೆಯಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಮಹಿಳೆಯರು ತಮ್ಮ ಸ್ತನದ ಗಾತ್ರದಿಂದ ಬೇಸರಗೊಂಡು ಅದನ್ನು ಕುಗ್ಗಿಸುವ ಸಲುವಾಗಿ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಇದು ಆಕೆಯ ದೈಹಿಕ ಹಾಗೂ ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮವನ್ನು ಬೀರಬಲ್ಲ ನಿರ್ಧಾರ. ಸ್ತನದ ಗಾತ್ರ ಕುಗ್ಗಿಸುವ ಅಥವಾ ಹಿಗ್ಗಿಸುವಂಥ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ಕೆಲವೊಂದು ಅಂಶಗಳನ್ನು ಸ್ತ್ರೀಯರು ಪರಿಗಣಿಸಬೇಕಾಗುತ್ತದೆ.

ಮಹಿಳೆಯು ಸ್ತನ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಲು ಮುಖ್ಯ ಕಾರಣವೆಂದರೆ, ದೈಹಿಕವಾಗಿ ಅಸ್ವಸ್ಥರಾಗಿರುವುದು. ದೊಡ್ಡ ಸ್ತನಗಳಿಂದ ಉಂಟಾಗುತ್ತಿರುವ ಅತಿಯಾಗಿ ನೋವಿನ...