ಭಾರತ, ಏಪ್ರಿಲ್ 21 -- ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತಿ ದೊಡ್ಡ ಹಿಟ್‌ ಕಂಡ ಚಿತ್ರ ಎಂದರೆ ಅಮಿತಾಬ್ ಬಚ್ಚನ್‌ ನಟನೆಯ 'ಶೋಲೆ'. ಭಾರತದಲ್ಲಿ ಈ ಚಿತ್ರದ 20 ಕೋಟಿಗೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದವು. ವಿದೇಶಗಳಲ್ಲೂ ಲಕ್ಷಾಂತರ ಟಿಕೆಟ್ ಮಾರಾಟವಾಗಿತ್ತು. ಇದರ ಆಧಾರದ ಮೇಲೆ ಭಾರತದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಸಿನಿಮಾ ಶೋಲೆ ಎಂದು ಹೇಳಲಾಗುತ್ತದೆ. ಬಹಳ ಹಿಂದಿನಿಂದಲೂ ಶೋಲೆ ದಾಖಲೆಯನ್ನು ಯಾವ ಚಿತ್ರಕ್ಕೂ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ ಕೇಬಲ್‌ ಟಿವಿ ಹಾಗೂ ಇಂಟರ್ನೆಟ್ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ. ಈಗ, ವೀಕ್ಷಕರನ್ನು ಆರ್‌ಪಿಎಸ್‌ ಸ್ಟ್ರೀಮಿಂಗ್ ನಿಮಿಷಗಳು ಮತ್ತು ಯುಟ್ಯೂಬ್‌ ವೀಕ್ಷಣೆಗಳಲ್ಲಿಯೂ ಅಳೆಯಲಾಗುತ್ತದೆ. ಇದರ ಪ್ರಕಾರ ನೋಡಿದರೆ ಭಾರತದಲ್ಲಿ ಶೋಲೆ ಖಂಡಿತ ಅತಿ ಹೆಚ್ಚು ವೀಕ್ಷಿಸಿದ ಚಿತ್ರವಲ್ಲ. ಹಾಗಾದರೆ ಯಾವುದಿರಬಹುದು ಈ ಸಿನಿಮಾ ಅಂತ ಯೋಚಿಸ್ತಾ ಇದೀರಾ, ಮುಂದೆ ಓದಿ.

ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿದ ಚಿತ್ರಕ್ಕೂ ನಾಯಕ ಅಮಿತಾಬ್‌ ಬಚ್ಚನ್‌. ಆದರೆ ಇದು ಖಂಡಿತ ಶೋಲೆ ಅಲ್ಲ....