ಭಾರತ, ಮಾರ್ಚ್ 7 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಸಿಹಿ ಸುದ್ದಿ ಮತ್ತು ನ್ಯೂಜಿಲೆಂಡ್ ತಂಡಕ್ಕೆ ಕಹಿ ಸುದ್ದಿಯೊಂದು ಸಿಕ್ಕಿದೆ. ಭುಜದ ಗಾಯದ ಸಮಸ್ಯೆ ಎದುರಿಸುತ್ತಿರುವ ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರು ಟೀಮ್ ಇಂಡಿಯಾ ವಿರುದ್ಧದ ಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದರೆ ಕೋಚ್ ಗ್ಯಾರಿ ಸ್ಟೀಡ್ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಚೇತರಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತ ವಿರುದ್ಧದ ಗ್ರೂಪ್ ಪಂದ್ಯದಲ್ಲಿ 5 ವಿಕೆಟ್ ಸಾಧನೆ ಸೇರಿದಂತೆ ಟೂರ್ನಿಯಲ್ಲಿ ಹೆನ್ರಿ ಈವರೆಗೆ 10 ವಿಕೆಟ್​ ಉರುಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಲಾಹೋರ್​ನಲ್ಲಿ ಮಾರ್ಚ್ 5ರ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ 33 ವರ್ಷದ ಹೆನ್ರಿ ಗಾಯಗೊಂಡಿದ್ದರು. ಮ್ಯಾಟ್ ಅವರ ಭುಜದ ಗಾಯಕ್ಕೆ ತುತ್ತಾಗಿದ್ದು, ಚೇತರಿಕೊಳ್ಳುತ್ತಿದ್ದಾರೆ ಎಂದು ಸ್ಟೀಡ್ ಶುಕ್ರವಾರ (ಮಾ 7) ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಸ್ತುತ ಸ್ಕ್...