ಭಾರತ, ಏಪ್ರಿಲ್ 18 -- ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಮೊದಲ ಹೈ-ಸ್ಪೀಡ್ ಬುಲೆಟ್ ರೈಲು ಯೋಜನೆ ಜಾರಿಗೊಳಿಸುವುದಕ್ಕಾಗಿ ಜಪಾನ್‌ ದೊಡ್ಡ ಉಡುಗೊರೆಯನ್ನೇ ನೀಡಿದೆ. ಹೌದು, ಇ5 ಮತ್ತು ಇ3 ಸರಣಿಯ ಎರಡು ಶಿಂಕಾನ್ಸೆನ್ ಬುಲೆಟ್ ರೈಲುಗಳ ಸೆಟ್‌ ಅನ್ನು ಭಾರತಕ್ಕೆ ಉಡುಗೊರೆಯಾಗಿ ನೀಡುವುದಾಗಿ ಘೋ‍ಷಿಸಿದೆ. ಈ ಎರಡೂ ರೈಲುಗಳು ಭಾರತದ ಮುಂಬೈ - ಅಹಮದಾಬಾದ್‌ ಹೈಸ್ಪೀಡ್ ರೈಲು ಮಾರ್ಗದಲ್ಲಿ ಪರೀಕ್ಷಾರ್ಥ ಓಡಲಿದೆ. ಮುಂದೆ ನಿಯತ ಸಂಚಾರಕ್ಕೆ ಬಳಕೆಯಾಗಲಿದೆ.

ಈ ರೈಲುಗಳು 2026 ರ ಆರಂಭದಲ್ಲಿ ಭಾರತಕ್ಕೆ ಬರಲಿವೆ ಎಂದು ವರದಿಯಾಗಿದೆ. ಇದರ ನಂತರ, ಅವುಗಳಲ್ಲಿ ಅಗತ್ಯ ತಪಾಸಣೆ ಸಾಧನಗಳನ್ನು ಸ್ಥಾಪಿಸಲಾಗುತ್ತದೆ. ಬಳಿಕ ಪ್ರಾಯೋಗಿಕ ಸಂಚಾರಕ್ಕೆ ಬಳಕೆಯಾಗಲಿದೆ.

ಈ ರೈಲುಗಳು ವಿಶೇಷವಾಗಿ ಶಾಖ, ಧೂಳು ಮತ್ತು ತೇವಾಂಶದಂತಹ ಭಾರತದ ಪರಿಸ್ಥಿತಿಗಳ ಬಗ್ಗೆ ಡೇಟಾವನ್ನು ಸಂಗ್ರಹಿಸುತ್ತವೆ. ಇದು ಜಪಾನ್‌ಗೆ ಸಹ ಪ್ರಯೋಜನವನ್ನು ನೀಡಲಿದೆ. ಏಕೆಂದರೆ ಈ ಡೇಟಾದ ಸಹಾಯದಿಂದ, ಮುಂದಿನ ಪೀಳಿಗೆಯ ಇ 10 ಸರಣಿಯ ವಿನ್ಯಾಸವನ್ನು ಮತ್ತಷ್ಟು ಮಾಡಲು ಜಪಾನ್‌ ...