ಭಾರತ, ಮಾರ್ಚ್ 27 -- ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಕ್ರೇಜ್‌ ಫುಟ್ಬಾಲ್‌ಗೆ ಇಲ್ಲ. ಆದರೆ, ವರ್ಷ ಕಳೆದಂತೆ ಕಾಲ್ಚೆಂಡು ಕ್ರೀಡೆ ಕೂಡಾ ಜನಪ್ರಿಯತೆ ಜತೆಗೆ ಜನಮನ್ನಣೆ ಗಳಿಸುತ್ತಿದೆ. ಅದರಲ್ಲೂ ಅರ್ಜೆಂಟೀನಾ, ಪೋರ್ಚುಗಲ್ ಫುಟ್ಬಾಲ್ ತಂಡಗಳಿಗೆ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಜೊತೆಗೆ ಲಿಯೋನೆಲ್‌ ಮೆಸ್ಸಿ, ರೊನಾಲ್ಡೊ ಅವರಂಥ ದಿಗ್ಗಜ ಆಟಗಾರರ ಅಭಿಮಾನಿಗಳ ಸಂಖ್ಯೆಯೂ ಸಾಕಷ್ಟಿದೆ. ಇದೀಗ ಮೆಸ್ಸಿ ಅಭಿಮಾನಿಗಳಿಗೆ ಭರ್ಜರಿ ಶುಭಸುದ್ದಿ ಸಿಕ್ಕಿದೆ. ಮೆಸ್ಸಿ ನೇತೃತ್ವದ ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡವು 2025ರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಬರಲಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ ಪಂದ್ಯ ಆಡಲಿದ್ದು, ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ಈ ಕುರಿತು ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ​​(ಎಎಫ್‌ಎ) ಮಾರ್ಚ್‌ 26ರ ಬುಧವಾರ ಪ್ರಕಟಿಸಿದೆ.

2026ರ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯಗಳಿಗೆ ಮುಂಚಿತವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅರ್ಜೆಂಟೀನಾ ಮುಂದಾಗಿದೆ. ಎಎಫ್‌ಎ ...