ಭಾರತ, ಮಾರ್ಚ್ 18 -- Sunita Williams: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್‌) 9 ತಿಂಗಳ ವಾಸದ ಬಳಿಕ ಭೂಮಿಗೆ ಮರಳುತ್ತಿರುವ ನಾಸಾದ ಗಗನಯಾತ್ರಿ ಭಾರತೀಯ ಅಮೆರಿಕನ್ ಸುನಿತಾ ವಿಲಿಯಮ್ಸ್ ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಭಾರತಕ್ಕೆ ಬನ್ನಿ ಎಂದು ಹೃದ್ಯಭಾವದೊಂದಿಗೆ ಆಹ್ವಾನಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್ ಭಾನುವಾರ ಸ್ಪೇಸ್‌ ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸೂಲ್‌ ಮೂಲಕ ಭೂಮಿಗೆ ಮರು ಪ್ರಯಾಣ ಆರಂಭಿಸಿದ್ದು, ಇಂದು (ಮಾರ್ಚ್ 18) ಭೂಸ್ಪರ್ಶ ಮಾಡುವ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಬರೆದ ಹೃದಯಸ್ಪರ್ಶಿ ಪತ್ರವನ್ನು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನೀವು ಸಾವಿರಾರು ಮೈಲಿ ದೂರ ಇದ್ದರೂ, ನೀವು ನಮ್ಮ ಹೃದಯಕ್ಕೆ ಹತ್ತಿರವಿದ್ದೀರಿ. ಭಾರತದ ಜನರು ನಿಮ...