ಭಾರತ, ಮಾರ್ಚ್ 6 -- Gold Smuggling: ಚಿತ್ರನಟಿ ರನ್ಯಾರಾವ್‌ ಅಪಾರ ಪ್ರಮಾಣದಲ್ಲಿ ಚಿನ್ನ ಕಳ್ಳಸಾಗಾಣೆಯಲ್ಲಿ ಭಾಗಿಯಾದ ನಂತರ ಚಿನ್ನ ಕಳ್ಳ ಸಾಗಣೆ ಕುರಿತು ಹತ್ತು ಹಲವು ಪ್ರಶ್ನೆಗಳು ಮೂಡುತ್ತಿವೆ. ಚಿನ್ನವನ್ನೇ ಏಕೆ ಕಳ್ಳ ಸಾಗಾಣೆ ಮಾಡಲಾಗುತ್ತೆ? ಇದು ಅಷ್ಟೊಂದು ಲಾಭದಾಯಕವೇ? ಇದು ಸುಲಭದ ಕಾರ್ಯವೇ? ಎಲ್ಲರೂ ಕಳ್ಳ ಸಾಗಾಣೆ ಮಾಡಿ ಅಕ್ರಮವಾಗಿ ಹಣ ಸಂಪಾದಿಸಬಹುದೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಚೀನಾದ ನಂತರ ಭಾರತದಲ್ಲಿ ಚಿನ್ನಕ್ಕೆ ಅತಿ ಹೆಚ್ಚು ಬೇಡಿಕೆ ಇದೆ. ಸಾಂಪ್ರದಾಯಿಕ ಆಚರಣೆಗಳು, ವಿವಾಹ, ನಾಮಕರಣ, ಶುಭ ಸಮಾರಂಭ, ಹಬ್ಬ, ಹರಿದಿನಗಳ ಆಚರಣೆಗಳಲ್ಲಿ ಚಿನ್ನದ ಭರಣಗಳಿಗೆ ವಿಶೇಷ ಮಹತ್ವ ಇದೆ. ಇಂತಹ ವಿಶೇಷ ದಿನಗಳಲ್ಲಿ ಬಹುತೇಕ ಭಾರತೀಯರು ಚಿನ್ನದ ಆಭರಣ ಧರಿಸುವುದನ್ನು ಬಯಸುತ್ತಾರೆ ಮತ್ತು ಕೆಲವರಿಗೆ ಇದು ಪ್ರತಿಷ್ಠೆಯೂ ಹೌದು.

ಪ್ರತಿ ವರ್ಷ ಭಾರತದಲ್ಲಿ ಪ್ರತಿ ವರ್ಷ 1000 ಟನ್‌ ಚಿನ್ನಕ್ಕೆ ಬೇಡಿಕೆ ಇದ್ದು 800-900 ಟನ್‌ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 2023 ರಲ್ಲಿ ಭಾರತ 1,300 ಕೆಜಿ ಚಿನ...