ಭಾರತ, ಮೇ 20 -- ಯುಎಸ್‌ಎ ಕ್ರಿಕೆಟ್‌ ತಂಡ ಬಲಿಷ್ಠವಾಗಿದೆ ಎಂಬುದು ಈಗಾಗಲೇ ಹಲವು ಪಂದ್ಯಗಳಲ್ಲಿ ಸಾಬೀತಾಗಿದೆ. ಪಾಕಿಸ್ತಾನದಂತಹ ತಂಡಗಳನ್ನು ಸೋಲಿಸುವ ಸಾಮರ್ಥ್ಯ ಅಮೆರಿಕದ ತಂಡಕ್ಕಿದೆ. ಯುಎಸ್‌ಎ ತಂಡದಲ್ಲಿರುವ ಕ್ರಿಕೆಟಿಗರ ಪೈಕಿ ಹೆಚ್ಚಿನವರು ಭಾರತ ಮೂಲದವರೇ ಎಂಬುದು ಮತ್ತೊಂದು ಪ್ರಮುಖ ಅಂಶ. 2023-27ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ 2ರಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯುಎಸ್‌ ತಂಡ, ಕೆನಡಾ ವಿರುದ್ಧ 169 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನಲ್ಲಿ ಸ್ಟಾರ್‌ ಜೋಡಿ ಸ್ಮಿತ್ ಪಟೇಲ್ ಮತ್ತು ಮಿಲಿಂದ್ ಕುಮಾರ್ ಪ್ರಮುಖ ಪಾತ್ರ ವಹಿಸಿದರು. ಇವರಿಬ್ಬರೂ ತಲಾ ಶತಕಗಳನ್ನು ಸಿಡಿಸುವ ಮೂಕ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

ಪಂದ್ಯದಲ್ಲಿ ಯುಎಸ್ಎ ತಂಡವು ಕೇವಲ 3 ವಿಕೆಟ್‌ ಕಳೆದುಕೊಂಡು 361 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಲು ಈ ಇಬ್ಬರು ಸ್ಟಾರ್‌ಗಳು ಸಹಾಯ ಮಾಡಿದರು. ಇವರಲ್ಲಿ ಸ್ಮಿತ್ ಪಟೇಲ್ 137 ಎಸೆತಗಳಲ್ಲಿ 152 ರನ್ ಗಳಿಸಿದರೆ, ಮಿಲಿಂದ್ ಕುಮಾರ್ 67 ಎಸೆತಗಳಲ್ಲಿ ಭರ್ಜರಿ 115 ರನ್ ಗಳಿಸಿದರು. ...