Bengaluru, ಏಪ್ರಿಲ್ 24 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಏಪ್ರಿಲ್ 23ರ ಸಂಚಿಕೆಯಲ್ಲಿ ತಾಂಡವ್ ಅತ್ಯಂತ ಉತ್ಸಾಹದಿಂದ ಭಾಗ್ಯ ಮನೆಗೆ ಬಂದಿದ್ದಾನೆ. ಬರುವಾಗ ಆಫೀಸ್‌ಗೆ ಆರ್ಡರ್ ಮಾಡಿದ್ದ ಭಾಗ್ಯಳ ಕೈತುತ್ತಿನ ಊಟದ ಬಾಕ್ಸ್ ಕೂಡ ಹಿಡಿದುಕೊಂಡು ಬಂದಿದ್ದಾನೆ. ಅವನು ಬಂದ ಸಮಯದಲ್ಲಿ ಭಾಗ್ಯ, ಕುಸುಮಾ ಮತ್ತು ಸುಂದರಿ ಮನೆಯಲ್ಲಿ ಇರಲಿಲ್ಲ. ಅವರು ಕನ್ನಿಕಾ ಆಫೀಸ್‌ಗೆ ಹೋಗಿದ್ದರು. ಅಷ್ಟರಲ್ಲೇ ಮರಳಿ ಅವರು ಮನೆಗೆ ಬಂದಿದ್ದಾರೆ, ಅವರು ಬರುವುದನ್ನೇ ತಾಂಡವ್ ಕಾಯುತ್ತಾ ಕುಳಿತಿದ್ದ. ಜತೆಗೆ ಪೂಜಾ ಕೂಡ ಮನೆಗೆ ಬಂದಿದ್ದಾಳೆ. ಈಗ ಮನೆಯಲ್ಲಿ ಎಲ್ಲರೂ ಸೇರಿರುವುದರಿಂದ, ಅವನು ಊಟದ ವಿಚಾರ ಪ್ರಸ್ತಾಪಿಸಿ, ಭಾಗ್ಯಳ ಅಡುಗೆಯ ಸಂಗತಿ ಪ್ರಸ್ತಾಪಿಸಿದ್ದಾನೆ.

ಕುಸುಮಾ ಜತೆ ಮಾತನಾಡುತ್ತಾ, ನಿಮ್ಮ ಸೊಸೆ, ಅಲ್ಲಲ್ಲ, ಮಗಳು ಭಾಗ್ಯ, ಅತ್ಯುತ್ತಮ ಅಡುಗೆ ಮಾಡುತ್ತಾಳೆ ಎಂದು ಹೇಳುತ್ತಿದ್ದೀರಿ ಅಲ್ಲವೇ, ಅವಳಿಗಿಂತ ಉತ್ತಮ ಅಡುಗೆಯನ್ನು ನಾನು ನೋಡಿದ್ದೇನೆ, ತಿಂದಿದ್ದೇನೆ. ಅದರ ರುಚಿ ನೀವೂ ಕೂಡ ನೋಡಬೇಕು, ಅದಕ್...