Bengaluru, ಮಾರ್ಚ್ 18 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 17ರ ಸಂಚಿಕೆಯಲ್ಲಿ ತನ್ಮಯ್‌ ಶೂ ಪಾಲೀಶ್ ಮಾಡುವುದನ್ನು ಕಂಡು ತಾಂಡವ್ ಕೋಪಗೊಂಡಿದ್ದಾನೆ. ಕೂಡಲೇ ಅವನು ಭಾಗ್ಯಗೆ ಫೋನ್ ಮಾಡಿದ್ದಾನೆ. ಕೆಲಸದ ಮೇಲಿದ್ದ ಭಾಗ್ಯ ಮೊದಲಿಗೆ ಫೋನ್ ರಿಸೀವ್ ಮಾಡಿಲ್ಲ, ಆದರೆ ತಾಂಡವ್ ಮೊದಲಿಗೆ ಪದೇ ಪದೇ ಫೋನ್ ಮಾಡಿದಾಗ ಕರೆ ಸ್ವೀಕರಿಸಿದ್ದಾಳೆ, ಆಗ ತಾಂಡವ್ ಮಗನ ಬಗ್ಗೆ ಹೇಳಿದ್ದು, ಕೂಡಲೇ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ. ಕೊನೆಗೆ ಭಾಗ್ಯ ವಿಧಿಯಿಲ್ಲದೇ ಕೆಲಸ ಮಾಡುವ ಸ್ಥಳ ಬಿಟ್ಟು, ತಾಂಡವ್ ಹೇಳಿದ ಜಾಗಕ್ಕೆ ಬಂದಿದ್ದಾಳೆ. ಅಲ್ಲಿ ಮಗ ಶೂ ಪಾಲೀಶ್ ಮಾಡುತ್ತಿರುವುದನ್ನು ಕಂಡು ದಂಗಾಗಿದ್ದಾಳೆ.

ಮಗನ ಅವಸ್ಥೆ ಕಂಡು ಭಾಗ್ಯ ಒಮ್ಮೆಲೆ ಶಾಕ್‌ಗೆ ಒಳಗಾಗಿದ್ದಾಳೆ. ವಿಚಾರಿಸಿದಾಗ, ಶಾಲೆಯ ಫೀಸ್ ಕಟ್ಟಲು ಬಹಳಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ, ಸ್ವಲ್ಪ ಹಣವನ್ನೂ ಸಂಪಾದಿಸಿದ್ದಾನೆ. ಅದರಿಂದ ನಿಮಗೆ ಸಹಾಯವಾಗಬಹುದು. ನೀವು ಒಬ್ಬರೇ ಎಷ್ಟೊಂದು ಕಷ್ಟಪಡುತ್ತಿದ್ದೀರಿ. ನಿಮ...