Bengaluru, ಏಪ್ರಿಲ್ 15 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 14ರ ಸಂಚಿಕೆಯಲ್ಲಿ ಕುಸುಮಾ ಮತ್ತು ಧರ್ಮರಾಜ್ ರೆಗ್ಯುಲರ್ ಚೆಕಪ್‌ಗೆ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಹೊರಗಡೆ ತಾಂಡವ್ ಕಾರು ಇರುವುದನ್ನು ಗಮನಿಸಿದ್ದಾರೆ. ತಾಂಡವ್ ಪತ್ನಿ ಶ್ರೇಷ್ಠಾ ಜೊತೆ ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿಯಾಗಿದ್ದಾನೆ. ವೈದ್ಯರು ತಾಂಡವ್‌ನನ್ನು ಪರಿಶೀಲಿಸಿ, ಮಾತ್ರೆ ಬರೆದುಕೊಟ್ಟಿದ್ದಾರೆ. ನಿಮಗೆ ಹೊರಗಿನ ಊಟ ಒಗ್ಗುವುದಿಲ್ಲ, ಹಾಗಿದ್ದರೂ ಪಾರ್ಸೆಲ್ ಯಾಕೆ ಬೇಕು? ಮನೆಯ ಊಟವನ್ನೇ ಮಾಡಿ, ಪಾರ್ಸೆಲ್ ತಂದು ತಿನ್ನಬೇಡಿ ಎಂದು ಎಚ್ಚರಿಸಿದ್ದಾರೆ. ಈ ಮಾತುಗಳನ್ನು ಹೊರಗಡೆ ನಿಂತ ಕುಸುಮಾ ಕೇಳಿಸಿಕೊಂಡಿದ್ದಾಳೆ. ಚೆಕಪ್ ಮುಗಿಸಿಕೊಂಡು ತಾಂಡವ್ ಮತ್ತು ಶ್ರೇಷ್ಠಾ ಹೊರಗಡೆ ಬಂದಿದ್ದಾರೆ.

ಹೊರಗಡೆ ಕುಸುಮಾ ಮತ್ತು ಧರ್ಮರಾಜ್ ಕಂಡು ತಾಂಡವ್ ದಂಗಾಗಿದ್ದಾನೆ. ಅವನನ್ನು ಕಂಡ ಕುಸುಮಾ, ಏನಪ್ಪಾ ತಾಂಡವ್, ಚೆನ್ನಾಗಿದ್ದೀಯಾ ಎಂದು ಛೇಡಿಸಿದ್ದಾಳೆ. ಅಲ್ಲದೆ, ಹೆಂಡತಿ ಮಾಡುವ ಅಡುಗೆಯನ್ನು ಟೀಕಿಸಿದ್ದ...