Bengaluru, ಏಪ್ರಿಲ್ 13 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 11ರ ಸಂಚಿಕೆಯಲ್ಲಿ ತಾಂಡವ್ ಕೋಪದಿಂದ ಕುದಿಯುತಿದ್ದಾನೆ. ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು, ಬೀಳಿಸಿ, ಭಾಗ್ಯ ಮೇಲಿನ ಕೋಪವನ್ನು ತೀರಿಸಿಕೊಳ್ಳುತ್ತಿದ್ದಾನೆ. ಆಗ ಶ್ರೇಷ್ಠಾ ಬಂದಿದ್ದಾಳೆ. ಅವಳ ಬಳಿ, ನನಗೆ ಹೊಟ್ಟೆ ನೋವಿದೆ, ಹೊರಗಿನ ಊಟ ಬೇಡ ಎನ್ನುತ್ತಾನೆ ತಾಂಡವ್. ಅದಕ್ಕೆ ಅವಳು ಒಳ್ಳೆ ಹೋಟೆಲ್‌ನಿಂದ ಊಟ ತರಿಸಿದ್ದೇನೆ, ಚೆನ್ನಾಗಿದೆ, ತಿನ್ನು ಎನ್ನುತ್ತಾಳೆ. ಆಮೇಲೆ ಬೇಕಾದರೆ ನಾನು ಮನೆಯಲ್ಲೇ ರೆಡಿ ಮಾಡುತ್ತೇನೆ ಎನ್ನುತ್ತಾಳೆ. ಅದಕ್ಕೆ ತಾಂಡವ್ ಒಲ್ಲದ ಮನಸ್ಸಿನಿಂದ ಊಟ ಮಾಡುತ್ತಾನೆ.

ಹೋಟೆಲ್‌ನಿಂದ ಬಂದ ಪಾರ್ಸೆಲ್‌ನಲ್ಲಿ ಒಂದೆರಡು ತುತ್ತು ತಿಂದ ಕೂಡಲೇ ಅವನಿಗೆ ವಾಕರಿಕೆ ಬಂದಿದೆ. ವಾಂತಿ ಮಾಡಿಕೊಂಡ ತಾಂಡವ್ ಸುಸ್ತಾಗಿದ್ದಾನೆ, ಶ್ರೇಷ್ಠಾಗೆ ತಾಂಡವ್ ಸ್ಥಿತಿ ಕಂಡು ಕಸಿವಿಸಿಯಾಗಿದೆ. ಅಂತಹ ಸಂದರ್ಭದಲ್ಲೂ ತಾಂಡವ್ ಭಾಗ್ಯ ಮಾಡಿಕೊಡುತ್ತಿದ್ದ ರುಚಿರುಚಿಯಾದ ಊಟ, ತಿಂಡಿಯ ನೆನಪು ಮಾಡಿಕೊಳ್ಳುತ್ತಾ...