Bengaluru, ಫೆಬ್ರವರಿ 16 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 15ರ ಸಂಚಿಕೆಯಲ್ಲಿ ಭಾಗ್ಯ ಮತ್ತೊಂದು ಅಹಿತಕರ ಸನ್ನಿವೇಶ ಎದುರಿಸುವ ಪ್ರಸಂಗ ಬಂದಿದೆ. ಭಾಗ್ಯ ಮನೆಯಲ್ಲಿ ಆಕೆ ಕೆಲಸ ಹುಡುಕಿ, ರೆಸಾರ್ಟ್‌ನಲ್ಲಿ ಸೇರಿರುವ ವಿಚಾರ ತಿಳಿದಿಲ್ಲ. ಮತ್ತೊಂದೆಡೆ ತಾಂಡವ್ ಶ್ರೇಷ್ಠಾ ಜತೆ ಸೇರಿಕೊಂಡು, ತನ್ವಿ ಕಾಲೇಜಿನಲ್ಲಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ತನ್ವಿಯನ್ನು ಕರೆದುಕೊಂಡು ನಂತರ ಅವರು ರೆಸಾರ್ಟ್‌ಗೆ ತೆರಳಿದ್ದಾರೆ. ತನ್ವಿ ಮತ್ತು ಅವಳ ಸಹಪಾಠಿಗಳನ್ನು ಕೂಡ ಪಾರ್ಟಿಗೆ ಕರೆದಿದ್ದಾರೆ. ಅವರೆಲ್ಲರೂ ಖುಷಿ ಖುಷಿಯಾಗಿ ಪಾರ್ಟಿಗೆ ತೆರಳಿದ್ದಾರೆ. ರೆಸಾರ್ಟ್‌ನಲ್ಲಿ ಈಗಾಗಲೇ ಒಂದು ಬರ್ತ್‌ಡೇ ಪಾರ್ಟಿಯಲ್ಲಿ ಕುಣಿದಿರುವ ಭಾಗ್ಯ ತುಂಬಾ ಸುಸ್ತಾಗಿದ್ದಾಳೆ. ಸ್ವಲ್ಪ ವಿಶ್ರಾಂತಿಗೆ ಎಂದು ಕುಳಿತ ಅವಳಿಗೆ ಮ್ಯಾನೇಜರ್ ಬಂದು ಬೈದಿದ್ದಾರೆ. ಹೀಗಾಗಿ ಮತ್ತೆ ಕುಣಿದು ಜನರನ್ನು ರಂಜಿಸಲು ಭಾಗ್ಯ ತೆರಳಿದ್ದಾಳೆ.

ಈಗಾಗಲೇ ಬಹಳ ಹೊತ್ತಾಯಿತು, ಯಾಕೆ ಮಗಳು ಇನ್ನೂ ಮನೆಗೆ ಬಂದಿಲ್ಲ...