Bengaluru, ಮಾರ್ಚ್ 6 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಮಾರ್ಚ್ 5ರ ಸಂಚಿಕೆಯಲ್ಲಿ ಭಾಗ್ಯಗೆ ಮನೆ ಉಳಿಸಿಕೊಳ್ಳಲು ಹೊಸ ದಾರಿಯೊಂದು ದೊರೆತಿದೆ. ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವಳಿಗೆ ಅಲ್ಲಿ ಅಡುಗೆ ಕೆಲಸ ಮಾಡಲು ಕಾಂಟ್ರಾಕ್ಟ್ ದೊರೆಯುತ್ತದೆ, ಆದರೆ ಮೊದಲು ಅವರು ಕೆಲಸ ಕೊಡಲು ಒಪ್ಪುವುದಿಲ್ಲ. ಅಷ್ಟರಲ್ಲಿ ಪುರೋಹಿತರು ಬಂದು, ಭಾಗ್ಯ ತುಂಬಾ ಚೆನ್ನಾಗಿ ಅಡುಗೆ ಕೆಲಸ ಮಾಡುತ್ತಾರೆ, ಅವರ ಅಡುಗೆಗೆ ಒಳ್ಳೆಯ ರುಚಿಯಿದೆ, ಹೆಸರಿಗೆ, ಹೀಗಾಗಿ ಅವರಿಗೆ ಕೆಲಸ ಕೊಡಿ ಎಂದು ಹೇಳುತ್ತಾರೆ. ಅದಕ್ಕೆ ಭಾಗ್ಯ, ಕೂಡ ನಾನು ಕೆಲಸ ಮಾಡುತ್ತೇನೆ, ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ ಎನ್ನುತ್ತಾಳೆ. ಹೀಗಾಗಿ ಅವಳಿಗೆ ಅಡುಗೆಯ ಉಸ್ತುವಾರಿ ಕೆಲಸ ದೊರೆತಿದೆ. ಅವಳು ಅಡುಗೆ ಕೆಲಸ ಶುರು ಮಾಡಿದ್ದಾಳೆ.

ಭಾಗ್ಯಗೆ ಅಡುಗೆ ಕೆಲಸಕ್ಕೆ ನೆರವಾಗಲು ಬಂದಿದ್ದ ಕುಸುಮಾ, ಅಡುಗೆ ಮಾಡುವ ಅವಸರದಲ್ಲಿ ಕಾಲಿಗೆ ಬಿಸಿನೀರು ಹಾಕಿಕೊಂಡಿದ್ದಾಳೆ. ಇದರಿಂದ ಕಾಲಿಗೆ ಗಾಯವಾಗಿದೆ, ಹೀಗಾಗಿ ಭಾಗ್ಯ ಕೂಡಲೇ, ಪೂಜಾ ಜೊತೆ ಅವ...