Bengaluru, ಜನವರಿ 30 -- Bhagyalakshmi Serial: ಅಂತೂ ಇಂತೂ ಭಾಗ್ಯಾಗೆ ಹೊಸ ಕಾರು ಬಂದಿದೆ. ಹೊಸ ಕಾರಿನಲ್ಲೇ ಎಲ್ಲರೂ ದೇವಸ್ಥಾನಕ್ಕೆ ಹೋಗಿದ್ದಾರೆ. ದೇವಸ್ಥಾನದಲ್ಲಿ ಕಾರಿಗೆ ಪುರೋಹಿತರು ಭರ್ಜರಿ ಪೂಜೆ ಮಾಡಿದ್ದಾರೆ. ನಿಂಬೆ ಹಣ್ಣು ಇಟ್ಟು, ಕಾಯಿ ಒಡೆದು, ಒಳಿತಾಗಲಿ ಎಂದು ಹರಸಿದ್ದಾರೆ. ಅದಾದ ನಂತರ ಕಾರು ತೆಗೆದುಕೊಂಡು ಧರ್ಮರಾಜ್ ಮತ್ತು ಕುಟುಂಬದವರು ಮನೆಗೆ ತೆರಳಿದ್ದಾರೆ. ಭಾಗ್ಯಾ ಮಾತ್ರ ತಾನು ಕೆಲಸ ಮಾಡುವ ಹೋಟೆಲ್‌ಗೆ ತೆರಳಿದ್ದಾರೆ.

ಹೋಟೆಲ್‌ಗೆ ತೆರಳಿದ ಬಳಿಕ ಭಾಗ್ಯಾ, ತನ್ನ ಸಹೋದ್ಯೊಗಿಗಳಿಗೆ ಸಿಹಿ ಹಂಚಿದ್ದಾರೆ. ಸಿಹಿ ಹಂಚಲು ಕಾರಣವೇನು ಎಂದು ಕೇಳಿದಾಗ, ಮಾವನಿಗೆ ಹೊಸ ಕಾರು ಕೊಡಿಸಿದೆ. ಆ ಖುಷಿಯಲ್ಲಿ ಸಿಹಿ ಹಂಚುತ್ತಿದ್ದೇನೆ ಎಂದಿದ್ದಾಳೆ. ಮಾವನ ಬಳಿ ಹಳೆಯ ಸ್ಕೂಟರ್ ಇದೆ, ಅದರ ಬ್ರೇಕ್ ಕೂಡ ಸರಿಯಿಲ್ಲ. ಇನ್ನು ಬಿದ್ದು ಏಟು ಮಾಡಿಕೊಳ್ಳುವುದು ಬೇಡ ಎಂದು ಹೊಸ ಕಾರು ಕೊಡಿಸಿದೆ ಎಂದ ಭಾಗ್ಯಾಳ ಕಾಳಜಿಗೆ ಅವಳ ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಮತ್ತೊಂದೆಡೆ ಭಾಗ್ಯಾಳ ಮ್ಯಾನೇಜರ್ ಬಂದು, ...