Bengaluru, ಮಾರ್ಚ್ 29 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಮಾರ್ಚ್ 28ರ ಸಂಚಿಕೆಯಲ್ಲಿ ಭಾಗ್ಯಳಿಗೆ ತಾಂಡವ್ ಆಫೀಸ್‌ನಿಂದ ಊಟಕ್ಕೆ ಕರೆ ಬಂದಿದೆ. ಅದು ತಾಂಡವ್‌ನ ಆಫೀಸ್ ಎಂದು ಒಂದು ಕ್ಷಣ ಭಾಗ್ಯ ಗೊಂದಲಕ್ಕೆ ಒಳಗಾಗಿದ್ದಾಳೆ. ಆದರೆ ನಂತರ, ಊಟ ಕೊಡುವುದು ನನ್ನ ವೃತ್ತಿ, ಅದಕ್ಕೂ ನಮ್ಮ ಬಾಂಧವ್ಯ ಕಡಿದಿರುವುದಕ್ಕೂ ಸಂಬಂಧವಿಲ್ಲ ಎಂದು ಊಟ ತಯಾರಿಸಿದ್ದಾಳೆ. ಬಳಿಕ ಅದನ್ನು ತಾಂಡವ್ ಆಫೀಸ್‌ಗೆ ಕೊಟ್ಟು ಬಂದಿದ್ದಾಳೆ. ಅಲ್ಲಿ ಒಟ್ಟು ನಾಲ್ಕು ಜನ ಊಟ ಆರ್ಡರ್ ಮಾಡಿದ್ದಾರೆ. ಅವರ ಪೈಕಿ ಓರ್ವ ಬಂದು ಊಟದ ಡಬ್ಬ ತೆಗೆದುಕೊಂಡು ಹೋಗಿದ್ದಾನೆ.

ಭಾಗ್ಯಳ ಬಳಿ ಊಟ ಬುಕ್ ಮಾಡಿದ್ದವರ ಪೈಕಿ ಓರ್ವ, ಹೊರಗಡೆ ಹೋಗಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಆಗ ಅವನು ಊಟವನ್ನು ಯಾರಿಗೆ ಕೊಡಲಿ ಎಂದುಕೊಂಡಿರುವಾಗ, ಅಕಸ್ಮಾತ್ ಆಗಿ ಶ್ರೇಷ್ಠಾ ಎದುರಾಗುತ್ತಾಳೆ. ಅವಳಿಗೆ ಊಟವನ್ನು ಕೊಟ್ಟು, ಅದನ್ನು ಗೌರವ್‌ಗೆ ಕೊಡುವಂತೆ ಹೇಳಿ ಅವನು ಹೊರಗಡೆ ಹೋಗುತ್ತಾನೆ. ಇದೇನು ಮನೆ ಊಟ ಎಂದು ಶ್ರೇಷ್ಠಾ ಅದನ್ನು ತೆಗೆದುಕೊಂಡು ಹೋ...