Bengaluru, ಏಪ್ರಿಲ್ 8 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 7ರ ಸಂಚಿಕೆಯಲ್ಲಿ ಭಾಗ್ಯ ತನ್ಮಯ್‌ನ ಸ್ಕೂಲ್ ಫೀಸ್ ಕಟ್ಟಬೇಕು ಎಂದುಕೊಂಡಿದ್ದಾಳೆ. ಮತ್ತೊಂದೆಡೆ ಪೂಜಾ ಇಂಟರ್‌ವ್ಯೂಗೆ ಹೋಗಲು ರೆಡಿಯಾಗುತ್ತಿದ್ದಾಳೆ. ಇತ್ತ ಮನೆಯಲ್ಲಿ ತಾಂಡವ್‌ಗೆ ಕುಸುಮಾಳ ಮಾತಿನಿಂದ ತೀವ್ರ ಅವಮಾನವಾಗಿದೆ. ಹೀಗಾಗಿ ಅವನು ಮನೆಯಲ್ಲಿ ಬಾಲಸುಟ್ಟ ಬೆಕ್ಕಿನಂತೆ ಸುತ್ತಾಡುತ್ತಿದ್ದಾನೆ. ಅಲ್ಲದೆ, ತಾನೇ ತನ್ಮಯ್‌ನ ಫೀಸ್ ಕಟ್ಟುವೆ ಎಂದುಕೊಂಡಿದ್ದ. ಆದರೆ ಅದಕ್ಕೆ ಭಾಗ್ಯ ಅಡ್ಡಿಪಡಿಸುತ್ತಿದ್ದಾಳೆ. ಆದ್ದರಿಂದ ಅವನು ಏನು ಮಾಡಬಹುದು ಎಂದು ಯೋಚಿಸುತ್ತಾ ಕುಳಿತಿದ್ದಾನೆ. ಆಗ ಶ್ರೇಷ್ಠಾ ಅಲ್ಲಿಗೆ ಬಂದಿದ್ದಾಳೆ.

ಪೂಜಾ ಇಂಟರ್‌ವ್ಯೂಗೆ ಹೋಗಿದ್ದಾಳೆ. ಜಿಮ್‌ನಲ್ಲಿ ರಿಸೆಪ್ಟನಿಸ್ಟ್ ಕೆಲಸ ಮಾಡುವ ಯೋಚನೆ ಅವಳದ್ದು, ಹೀಗಾಗಿ ಕೆಲಸ ಮಾಡಲು ಮುಂದಾಗಿದ್ದಾಳೆ. ಅಲ್ಲಿ ಅವಳಂತೆಯೇ ನಾಲ್ಕೈದು ಮಂದಿ ಬಂದಿದ್ದಾರೆ. ಅವರೆಲ್ಲರ ಬಳಿ ರೆಸ್ಯೂಮ್ ತೆಗೆದುಕೊಂಡಿದ್ದಾರೆ. ನಂತರ ಹತ್ತು ನಿಮಿಷದಲ್ಲಿ ವಾಪಸ್ ಬಂದು, ಇವತ್ತು ಇಂಟರ...