Bengaluru, ಮಾರ್ಚ್ 28 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಕನ್ನಿಕಾಳಿಗೆ ಭಾಗ್ಯ ಮತ್ತೊಮ್ಮೆ ಮಂಗಳಾರತಿ ಮಾಡಿದ್ದಾಳೆ. ಹಾಸ್ಟೆಲ್ ಬಳಿ ಊಟ ಹಂಚುತ್ತಿದ್ದ ಭಾಗ್ಯಳನ್ನು ಕಂಡ ಕನ್ನಿಕಾ, ಅವಳನ್ನು ಕಾರಿನ ಬಳಿ ಕರೆಸಿಕೊಂಡಿದ್ದಾಳೆ. ನಂತರ ಅವಳಿಗೆ ಅವಮಾನ ಮಾಡುವ ಉದ್ದೇಶದಿಂದ ನೀವೆಲ್ಲ ಬೀದಿಗೆ ಬಂದಿದ್ದೀರಿ ಎಂದು ಹೀಯಾಳಿಸುತ್ತಾಳೆ. ಆದರೆ ಭಾಗ್ಯ ಮಾತ್ರ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಬದಲಾಗಿ, ಕನ್ನಿಕಾಗೆ ಮುಟ್ಟಿ ನೋಡುವಂತೆ ಉತ್ತರಿಸಿದ್ದಾಳೆ. ನಿನ್ನ ಅಪ್ಪ, ಅಮ್ಮ ಮಾಡಿದ್ದ ಆಸ್ತಿಯನ್ನು ನೀನು ಅನುಭವಿಸುತ್ತಿದ್ದೀ, ಅಷ್ಟೇ ನಿನ್ನ ಸಾಧನೆ, ಅದಕ್ಕಿಂತ ಹೆಚ್ಚಿಗೆ ಏನಿಲ್ಲ, ನಿನ್ನದು ಎಂಬ ಸ್ವಂತಿಕೆ ಇಲ್ಲ ಎಂದು ಜೋರಿನಲ್ಲಿ ಹೇಳಿದ್ದಾಳೆ. ಅದನ್ನು ಕೇಳಿ ಕನ್ನಿಕಾಗೆ ಮುಖಭಂಗವಾಗಿದೆ. ಅವಳು ಅಲ್ಲಿಂದ ಮೆಲ್ಲನೆ ಕಳಚಿಕೊಂಡಿದ್ದಾಳೆ.

ತಂದಿದ್ದ ಊಟವನ್ನೆಲ್ಲಾ ಉಚಿತವಾಗಿ ಹಾಸ್ಟೆಲ್ ಹುಡುಗರಿಗೆ ಹಂಚಿದ ಬಳಿಕ ಭಾಗ್ಯ, ಪೂಜಾ ಮತ್ತು ಸುಂದರಿ ಜತೆ ಮನೆಗೆ ಮರಳಿದ್ದಾಳೆ...