Bengaluru, ಏಪ್ರಿಲ್ 16 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 15ರ ಸಂಚಿಕೆಯಲ್ಲಿ ಭಾಗ್ಯ ಮನೆಯಲ್ಲಿ ಊಟ ತಯಾರಿಸಿ, ಅದನ್ನು ಫುಡ್ ಇನ್ಸ್‌ಪೆಕ್ಟರ್ ಬಳಿ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲಿ ಅವಳು ಹೋದಾಗ, ಮನೆಯಲ್ಲಿ ಸೀಜ್ ಮಾಡಿಕೊಂಡು ಅಧಿಕಾರಿಗಳು ತೆಗೆದುಕೊಂಡು ಬಂದಿದ್ದ ಊಟದ ಡಬ್ಬಿಯನ್ನು ಅಲ್ಲಿನ ಸಿಬ್ಬಂದಿ ಸವಿಯುತ್ತಿರುವುದು ಕಾಣಿಸುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಧಿಕಾರಿಯ ಜತೆ ಭಾಗ್ಯ, ಲೈಸನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಕೇಳುತ್ತಾಳೆ. ಅದಕ್ಕೆ ಆತ, ಅಲ್ಲಿದ್ದ ಸಿಬ್ಬಂದಿ ತೋರಿಸಿ, ಅವರಲ್ಲಿ ಕೇಳಿ ಎನ್ನುತ್ತಾನೆ. ನಂತರ ಭಾಗ್ಯ ಬಳಿ ದುಡ್ಡು ತೆಗೆದುಕೊಂಡು ಎಣಿಸಿಕೊಂಡು, ಜೇಬಿಗೆ ಇಳಿಸುತ್ತಾನೆ.

ಭಾಗ್ಯಳ ಊಟವನ್ನು ಅಲ್ಲಿನ ಸಿಬ್ಬಂದಿ ಬಾಯಿತುಂಬಾ ತಿಂದು ಹೊಗಳುತ್ತಾರೆ. ಖುಷಿಯಿಂದ ಅವರು ಊಟ ಮಾಡುವುದನ್ನು ನೋಡಿ ಭಾಗ್ಯಗೆ ಕಣ್ಣು ತುಂಬಿ ಬರುತ್ತದೆ. ಅಲ್ಲದೆ, ಸಿಬ್ಬಂದಿ, ಅಧಿಕಾರಿಯ ಬಳಿ, ಊಟ ತುಂಬಾ ಚೆನ್ನಾಗಿದೆ, ಇದನ್ನು ಪರೀಕ್ಷೆ ಮಾಡದೆಯೇ...