Bengaluru, ಏಪ್ರಿಲ್ 22 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 21ರ ಸಂಚಿಕೆಯಲ್ಲಿ ಭಾಗ್ಯ ಆಹಾರ ಇಲಾಖೆಯಿಂದ ಲೈಸನ್ಸ್ ಪಡೆದುಕೊಂಡು ಮನೆಗೆ ಬಂದಿದ್ದಾಳೆ. ನಂತರ ಮನೆಯವರಿಗೆ ಹೇಗೆ ನನಗೆ ಲೈಸನ್ಸ್ ಸಿಕ್ಕಿತು, ಆಹಾರ ಇಲಾಖೆಯ ನಿರ್ದೇಶಕರು ಹೇಗೆ ಬೆಂಬಲಿಸಿದರು ಮತ್ತು ನ್ಯಾಯವಾಗಿ ಹೇಗೆ ಲೈಸನ್ಸ್ ಪಡೆದುಕೊಂಡೆ ಎಂದು ವಿವರಿಸಿದ್ದಾಳೆ. ಅಲ್ಲದೆ, ಭ್ರಷ್ಟಾಚಾರದಲ್ಲಿ ತೊಡಗಿದ್ದ ಇನ್ಸ್‌ಪೆಕ್ಟರ್‌ಗೆ ನಿರ್ದೇಶಕರು ಸಸ್ಪೆಂಡ್ ಶಿಕ್ಷೆ ನೀಡಿರುವುದನ್ನು ಕೂಡ ಭಾಗ್ಯ ಮನೆಯಲ್ಲಿ ಹೇಳಿದ್ದಾಳೆ. ಅಲ್ಲದೆ, ಕನ್ನಿಕಾ ಕೂಡ ಅಲ್ಲಿಗೆ ಬಂದು ಕಿರುಕುಳ ಕೊಟ್ಟಿರುವುದನ್ನು ಕುಸುಮಾ ಮತ್ತು ಧರ್ಮರಾಜ್ ಬಳಿ ಭಾಗ್ಯ ತಿಳಿಸಿದ್ದಾಳೆ. ಅವಳಿಗೆ ಸುಂದರಿ ಸಾಥ್ ನೀಡಿದ್ದಾಳೆ.

ಅದನ್ನು ಕೇಳಿ ಮನೆಯವರೆಲ್ಲ ಸಂತಸ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಇನ್ನು ಮುಂದೆ ಯಾವುದೇ ಸಮಸ್ಯೆಯಿಲ್ಲದೆ, ನಾವು ಕೈತುತ್ತು ಊಟದ ಸೇವೆ ನೀಡಬಹುದು ಎಂದು ಸಂಭ್ರಮಿಸಿದ್ದಾರೆ. ನಂತರ ಕುಸುಮಾ, ಭಾಗ್ಯಳನ್ನು ಕರೆದುಕೊಂಡು ಸುಮಾರು 30 ಜ...