Bengaluru, ಮಾರ್ಚ್ 9 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಕಥಾನಾಯಕಿ ಭಾಗ್ಯಗೆ ಹಲವು ಸಂಕಷ್ಟಗಳು ಎದುರಾಗುತ್ತಲೇ ಇವೆ. ಆದರೂ ಆಕೆ ಎದೆಗುಂದದೇ, ಅವೆಲ್ಲವನ್ನೂ ಎದುರಿಸಿ ಸಾಗುತ್ತಿದ್ದಾಳೆ. ಮತ್ತೊಂದೆಡೆ ತಾಂಡವ್ ಮತ್ತು ಶ್ರೇಷ್ಠಾ ಮದುವೆಯಾದ ಬಳಿಕ, ಭಾಗ್ಯ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಬಹುದು ಮತ್ತು ಹೇಗೆ ಅವಳಿಗೆ ಅವಮಾನ ಮಾಡಬಹುದು ಎಂದು ಪ್ಲ್ಯಾನ್ ಮೇಲೆ ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೂ ಅವರ ಪ್ಲ್ಯಾನ್ ಕೊನೆಗೆ ಫ್ಲಾಪ್ ಆಗಿ, ಭಾಗ್ಯಗೆ ಗೆಲುವಾಗುತ್ತಿದೆ. ಭಾಗ್ಯಳ ಕೆಲಸ ಕಿತ್ತುಕೊಂಡರೂ, ಅವಳು ಮತ್ತೆ ಸಾಧನೆ ಮಾಡಿ ತೋರಿಸಿದ್ದಾಳೆ. ಅಲ್ಲದೆ, ಕಷ್ಟಪಟ್ಟು ಹಣ ಹೊಂದಿಸಿದ್ದಾಳೆ. ಹೀಗಾಗಿ ಅವಳ ಗೆಲುವು ಕಂಡು ತಾಂಡವ್ ಮತ್ತು ಶ್ರೇಷ್ಠಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮನೆಗೆ ಮಾಡಿರುವ ಸಾಲದ ಕಂತನ್ನು ತಾಂಡವ್ ಹಾಗೆಯೇ ಉಳಿಸಿಕೊಂಡಿದ್ದಾನೆ. ಐದು ತಿಂಗಳಿನಿಂದ ಕಂತು ಬಾಕಿ ಇದ್ದಿದ್ದರಿಂದ ಬ್ಯಾಂಕಿನವರು ಮನೆಗೆ ಬಂದಿದ್ದಾರೆ. ಮನೆಯನ್ನು ಸೀಝ್ ಮಾಡಲು ಮುಂದಾಗಿದ್ದಾರೆ, ಆದರೆ ಭಾಗ್ಯ...