ಭಾರತ, ಏಪ್ರಿಲ್ 12 -- Rajesh Dhruva in Bhagya Lakshmi Serial: ನಟ ರಾಜೇಶ್ ಧ್ರುವ ಕನ್ನಡದಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು, ಕಲರ್ಸ್ ಕನ್ನಡದ 'ಅಗ್ನಿಸಾಕ್ಷಿ'. ಅಗ್ನಿಸಾಕ್ಷಿಯ ಅಖಿಲ್ ಪಾತ್ರ ಇಂದಿಗೂ ಜನಮಾನಸದಲ್ಲಿ ಹಾಗೇ ಉಳಿದುಕೊಂಡಿದೆ. ಇಂತಿಪ್ಪ ರಾಜೇಶ್ ಕಲರ್ಸ್ ಕನ್ನಡದಲ್ಲಿ 'ಶ್ರೀಗೌರಿ' ಧಾರಾವಾಹಿಯಲ್ಲಿ ಖಳನಟನ ಪಾತ್ರ ನಿರ್ವಹಿಸಿದ್ದರು. ಅದಾದ ಮೇಲೆ ಇದೀಗ ಮತ್ತೆ ಕಲರ್ಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್ ಪಾತ್ರದಲ್ಲಿ ನಟಿಸುತ್ತಿರುವ ಇವರು ಭಾಗ್ಯಕ್ಕನ ತಂಗಿ ಪೂಜಾಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪೂಜಾಗೆ ಕಾಲೇಜ್‌ನಲ್ಲಿ ಸೂಪರ್ ಸೀನಿಯರ್ ಆಗಿದ್ದ ಕಿಶನ್ ಕಂಪನಿಯಲ್ಲೇ ಪೂಜಾಗೆ ಕೆಲಸ ಸಿಕ್ಕಿದೆ. ಇನ್ನು ಪೂಜಾ-ಕಿಶನ್ ಲವ್ ಸ್ಟೋರಿ ಸ್ಟಾರ್ಟ್ ಆಗಬಹುದು ಎಂದು ಕಿರುತೆರೆ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಭಾಗ್ಯ ತನ್ನ ತಂಗಿಗೆ ಯೋಗ್ಯ ವರನನ್ನು ನೋಡಿ ಮದುವೆ ಮಾಡಿಸುವ ಜವಾಬ್ದಾರಿ...
Click here to read full article from source
To read the full article or to get the complete feed from this publication, please
Contact Us.