ಭಾರತ, ಏಪ್ರಿಲ್ 4 -- Bhavya Gowda's New Serial: ಕಲರ್ಸ್‌ ಕನ್ನಡದ ಕಿರುತೆರೆಯಲ್ಲಿ ಗೀತಾ ಸೀರಿಯಲ್ ಮೂಲಕ ನಾಡಿನ ಗಮನ ಸೆಳೆದ ನಟಿ ಭವ್ಯಾ ಗೌಡ. ಮೊದಲ ಸೀರಿಯಲ್‌ ಮೂಲಕವೇ ನೇಮು ಫೇಮು ಗಿಟ್ಟಿಸಿಕೊಂಡು, ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸ್ಪರ್ಧಿಯಾಗಿಯೂ ಭಾಗವಹಿಸಿ 100 ದಿನ ಪೂರೈಸಿದ್ದರು ಭವ್ಯಾ. ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ವಾರಕ್ಕೂ ಕಾಲಿರಿಸಿ ಟ್ರೋಫಿ ಗೆಲ್ಲುವ ಸ್ಪರ್ಧಿಯಲ್ಲೊಬ್ಬರಾಗಿದ್ದರು. ಇಂತಿಪ್ಪ ಭವ್ಯಾ ಗೌಡ, ಬಿಗ್‌ ಬಾಸ್‌ ಮುಗಿದ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಎಲ್ಲಿಯೂ ಅಪ್‌ಡೇಟ್‌ ಮಾಹಿತಿ ನೀಡಿರಲಿಲ್ಲ. ತುಟಿ ಬಿಚ್ಚಿರಲಿಲ್ಲ. ಇದೀಗ ಅಧಿಕೃತ ಘೋಷಣೆಗೂ ಮೊದಲೇ, ಅವರ ಮುಂದಿನ ಧಾರಾವಾಹಿ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ಹೌದು, ಜನವರಿ ತಿಂಗಳಲ್ಲಿಯೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಕೊನೆಯಾಗಿದೆ. ಅಲ್ಲಿಂದೀಚೆಗೆ ಎರಡು ತಿಂಗಳು ಕಳೆದರೂ ತಮ್ಮ ಮುಂದಿನ ಸೀರಿಯಲ್‌ ಬಗ್ಗೆ ರಿವೀಲ್‌ ಮಾಡಿರಲಿಲ್ಲ. ಇದೀಗ, ಅಚ್ಚರಿಯ ರೀತಿಯಲ್ಲಿ ಅವರ ಮುಂದಿನ ಸೀರಿಯಲ್‌ ಬಗ್ಗೆ ಮಾಹಿತಿ ಸಿಕ್ಕ...