ಭಾರತ, ಮಾರ್ಚ್ 30 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭರ್ಜರಿ ಬ್ಯಾಚ್ಯುಲರ್ಸ್ ಕಾರ್ಯಕ್ರಮದಲ್ಲಿ ಈ ವಾರ ಮಹಾಸಂಚಿಕೆ ಪ್ರಸಾರವಾಗಲಿದೆ. ಈಗಾಗಲೇ ಜೀ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರೋಮೋ ಬಿಡುಗಡೆಯಾಗಿದೆ. ರಕ್ಷಕ್ ಬುಲೆಟ್ ಮತ್ತು ರಮೋಲಾ ಇವರಿಬ್ಬರ ಜೋಡಿ ವೇದಿಕೆ ಮೇಲೆ ಮೋಡಿ ಮಾಡಿದೆ. ರಕ್ಷಕ್, ರಮೋಲಾ ಅವರ ಮನೆಯವರ ಜತೆ ಮಾತನಾಡಿದ್ದಾರೆ. ರಮೋಲಾ ಹಾಗೂ ಅವರ ಮನೆಯವರನ್ನು ಮೆಚ್ಚಿಸುವ ಸಲುವಾಗಿ ಬರುವಾಗಲೇ ಗುಲಾಬಿ ಹೂವುಗಳನ್ನು ಹಿಡಿದುಕೊಂಡು ರಕ್ಷಕ್ ಬಂದಿರುತ್ತಾರೆ. ಅದಾದ ನಂತರ ವೇದಿಕೆಯ ಮೇಲಿರುವ ಪ್ರತಿಯೊಬ್ಬರಿಗೂ ಗುಲಾಬಿ ಹೂ ನೀಡುತ್ತಾರೆ.

ಅಷ್ಟೇ ಅಲ್ಲ ಅದರ ಜತೆಗೆ ವೇದಿಕೆ ಮೇಲೆ ನಿಂತು ನಿರೂಪಣೆ ಮಾಡುತ್ತಿರುವ ನಿರಂಜನ್ ದೇಶಪಾಂಡೆ ಅವರಿಗೂ ಗುಲಾಬಿ ಹೂ ಕೊಟ್ಟು ಕಾಲಿಗೆ ನಮಸ್ಕಾರ ಮಾಡಿದ್ದಾರೆ. ರಕ್ಷಕ್ ಈ ರೀತಿ ಮಾಡಿದ ತಕ್ಷಣ ಅಲ್ಲಿರುವ ಎಲ್ಲರೂ ನಕ್ಕು, ನಕ್ಕು ಸುಸ್ತಾಗಿದ್ದಾರೆ. ರಮೋಲಾ ಅವರ ಮನೆಯವರ ಮನ ಮೆಚ್ಚಿಸಬೇಕಾದ ಸಂದರ್ಭದಲ್ಲಿ ರಕ್ಷಕ್ ತುಂಬಾ ನಗಿಸಿದ್ದಾರೆ. ರಮೋಲಾ ಮನೆಯವರು ರಕ...